ADVERTISEMENT

ಕಸಬಾ ಬೆಂಗ್ರೆ ಶಾಲೆ ದತ್ತು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 5:58 IST
Last Updated 21 ಆಗಸ್ಟ್ 2024, 5:58 IST
ಕಸಬಾ ಬೆಂಗ್ರೆ ಸರ್ಕಾರಿ ಶಾಲೆ ದತ್ತು ಸ್ವೀಕರಿಸುವ ಪತ್ರವನ್ನು ಮಂಜುನಾಥ ಭಂಡಾರಿ ನೀಡಿದರು
ಕಸಬಾ ಬೆಂಗ್ರೆ ಸರ್ಕಾರಿ ಶಾಲೆ ದತ್ತು ಸ್ವೀಕರಿಸುವ ಪತ್ರವನ್ನು ಮಂಜುನಾಥ ಭಂಡಾರಿ ನೀಡಿದರು   

ಮಂಗಳೂರು: ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಬೆಂಗ್ರೆ ಕಸಬಾ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಭಂಡಾರಿ ಫೌಂಡೇಶನ್ ಮೂಲಕ ಮಂಗಳವಾರ ದತ್ತು ಸ್ವೀಕರಿಸಿದ್ದಾರೆ.

“ಇದು ರಾಜ್ಯದ ಇತಿಹಾಸದಲ್ಲೇ ಪೂರ್ಣ ಪ್ರಮಾಣದ ದತ್ತು ಸ್ವೀಕಾರವಾಗಿದೆ. ಈ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತಮ ವಾತಾವರಣ ನಿರ್ಮಿಸುವ ಜೊತೆಗೆ ಹೊಸ ಕಟ್ಟಡ, ವಿದ್ಯುತ್, ಸ್ವಚ್ಛ ನೀರು, ಕ್ರೀಡಾ ಸೌಲಭ್ಯ ಸೇರಿದಂತೆ ಎಲ್ಲ ಮೂಲ ಸೌಕರ್ಯಅಭಿವೃದ್ಧಿಪಡಿಸಲಾಗುವುದು’ ಎಂದು ಭಂಡಾರಿ ಫೌಂಡೇಶನ್ ಸ್ಥಾಪಕ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

“ಬೆಂಗ್ರೆ ಕಸಬ ಸರಕಾರಿ ಶಾಲೆಗೆ 60ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಶಾಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 800ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಬಹುಕಾಲದ ಬೇಡಿಕೆಯನ್ನು ಮಂಜುನಾಥ ಭಂಡಾರಿ ಈಡೇರಿಸಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಮುಖರಾದ ಪದ್ಮರಾಜ್ ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ಕೆ.ಕೆ.ಶಾಹುಲ್ ಹಮೀದ್, ಲಾರೆನ್ಸ್ ಡಿಸೋಜ, ಅಶ್ರಫ್ ಬೆಂಗ್ರೆ, ಮುಖ್ಯ ಶಿಕ್ಷಕಿಯರಾದ ಶೋಭಾ.ಬಿ, ಸಂತೋಷ್ ಕುಮಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.