ADVERTISEMENT

ಬಳಂಜ: ಅದ್ಧೂರಿ ಹೊರೆಕಾಣಿಕೆ ಮೆರವಣಿಗೆ

ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಲೋಕಾರ್ಪಣೆ ಇಂದು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 12:26 IST
Last Updated 10 ಮಾರ್ಚ್ 2021, 12:26 IST
ಬಳಂಜದಲ್ಲಿ ನಡೆದ ಹೊರಕಾಣಿಕೆ ಮೆರವಣಿಗೆ ಹಾಗೂ ವಾಹನ ಜಾಥಕ್ಕೆ ಚಾಲನೆ
ಬಳಂಜದಲ್ಲಿ ನಡೆದ ಹೊರಕಾಣಿಕೆ ಮೆರವಣಿಗೆ ಹಾಗೂ ವಾಹನ ಜಾಥಕ್ಕೆ ಚಾಲನೆ   

ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಲೋಕಾರ್ಪಣೆ, ಬ್ರಹ್ಮಶ್ರೀ ನಾರಾಯಣ ಗುರುಗಳ 166ನೇ ವರ್ಷದ ಗುರುಜಯಂತಿ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಪ್ರಯುಕ್ತ ಬುಧವಾರ ಗ್ರಾಮಸ್ಥರಿಂದ ಹೊರಕಾಣಿಕೆ ಮೆರವಣಿಗೆ ಹಾಗೂ ಸಮರ್ಪಣೆ ಬುಧವಾರ ನಡೆಯಿತು.

ಬಳಂಜದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಬಳಂಜ-ನಾಲ್ಕೂರು- ತೆಂಕಕಾರಂದೂರು ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಆಶ್ರಯದಲ್ಲಿ ಬಳಂಜ ಸಂಘದ ವಠಾರದಲ್ಲಿ ಕಾರ್ಯಕ್ರಮ ನಡೆಯಿತು. ಕಾಪಿನಡ್ಕದಲ್ಲಿ ಸಂತೆಕಟ್ಟೆ ಸುವರ್ಣ ಆರ್ಕೆಡ್‌ನ ಮಾಲೀಕ ವೈ. ನಾಣ್ಯಪ್ಪ ಪೂಜಾರಿ ವಾಹನ ಜಾಥಾಕ್ಕೆ ಚಾಲನೆ ನೀಡಿದರು. ಬಳಂಜ ಪಂಚಾಯಿತಿ ಬಳಿ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಳಂಜ ನಾರಾಯಣಗುರು ಸೇವಾ ಸಮಿತಿಯ ಗೌರವ ಮಾರ್ಗದರ್ಶಕ ಕೆ. ವಸಂತ ಸಾಲಿಯಾನ್, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ ಮಿತ್ತಮಾರು, ಭಗೀರಥ ಜಿ, ಯೋಗೀಶ್ ಕುಮಾರ್, ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್, ಉಪಾಧ್ಯಕ್ಷ ಮನೋಹರ್ ಕುಮಾರ್ ಇಳಂತಿಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಚಿದಾನಂದ ಪೂಜಾರಿ ಆಲ್ದಡ್ಕ, ಬ್ರಹ್ಮಶ್ರೀ ಗೌರವಾಧ್ಯಕ್ಷ ಎಚ್. ಧರ್ಣಪ್ಪ ಪೂಜಾರಿ, ಸಂತೋಷ್ ಪಿ. ಕೋಟ್ಯಾನ್, ಸಹ ಸಂಚಾಲಕ ರಂಜಿತ್ ಎಚ್.ಡಿ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಯೈಕುರಿ, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ವಿನುಷಾ ಪ್ರಕಾಶ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಜಗದೀಶ್ ಬಳ್ಳಿದಡ್ಡ ಇದ್ದರು.

ADVERTISEMENT

ವಿವಿಧ ಸಮಿತಿಗಳ ಸಂಚಾಲಕರಾದ ಸಂತೋಷ್ ಕುಮಾರ್ ಕಾಪಿನಡ್ಕ, ಸುರೇಶ್ ಪೂಜಾರಿ ಜೈಮಾತಾ, ತಿಮ್ಮಪ್ಪ ಪೂಜಾರಿ ತಾರಿಪಡ್ಪು, ಪ್ರವೀಣ್ ಲಾಂತ್ಯಾರು, ಬಾಲಕೃಷ್ಣ ಪೂಜಾರಿ ಯೈಕುರಿ, ಜನಾರ್ದನ ಪೂಜಾರಿ ರಾಮನಗರ, ಲಕ್ಷ್ಮಣ ಪೂಜಾರಿ ಜಾರಿಗೆದಡಿ, ದೇಜಪ್ಪ ಪೂಜಾರಿ ಸುಧಾಮ, ನಾರಾಯಣ ಪೂಜಾರಿ ಮಜ್ಜೈನಿ, ಯತೀಶ್ ವೈ ಎಲ್ಯೊಟ್ಟು, ಹರೀಶ್ ವೈ ಚಂದ್ರಮಾ, ಚಂದ್ರಹಾಸ ಬಳಂಜ, ದಿನೇಶ್ ಪೂಜಾರಿ ಅಂತರ, ದಿನೇಶ್ ಕೋಟ್ಯಾನ್ ಕುದ್ರೊಟ್ಟು, ರವೀಂದ್ರ ಬಿ ಅಮೀನ್, ಯೋಗೀಶ್ ಪೂಜಾರಿ ಕೊಂಗುಲ, ಹೇಮಂತ್ ಗುಂಡೇರಿ, ನವೀನ್ ಲಾಂತ್ಯಾರು, ಸದಾನಂದ ಸಾಲಿಯಾನ್ ಬಳಂಜ, ದಿನೇಶ್ ಬಂಗೇರ ನಿಟ್ಟಡ್ಕ, ಪುಷ್ಪಾವತಿ ಹೇವಾ, ಶ್ಯಾಮ್ ಬಂಗೇರ ಪೆರಾಜೆ, ಪ್ರಮೋದ್ ಪೂಜಾರಿ ಸೂಳಬೆಟ್ಟು, ಲಲಿತಾ ಟೀಚರ್, ನೋಣಯ್ಯ ಪೂಜಾರಿ ಎಲ್ಯೊಟ್ಟು, ರವೀಂದ್ರ ಪೂಜಾರಿ ಹೇವಾ, ಬಿ.ಸಾಂತಪ್ಪ ಸುವರ್ಣ ಬಳಂಜ, ಯುವರಾಜ್ ವೈ ಎಲ್ಯೊಟ್ಟು, ಶ್ಯಾಮ್ ಬಂಗೇರ ಪೆರಾಜೆ, ಬಾಲಕೃಷ್ಣ ಪೂಜಾರಿ ಯೈಕುರಿ, ದಿನೇಶ್ ಪೂಜಾರಿ ಕುದ್ರೊಟ್ಟು, ಸುರೇಶ್ ಪೂಜಾರಿ ನಾಲ್ಕೂರು, ದಿನೇಶ್ ಪೂಜಾರಿ ಅಂತರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.