ADVERTISEMENT

ಇ– ಆಟೊಗಳಿಗಾಗಿ ‘ಗ್ರೀನ್‌ ನಾಟ್‌’ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 19:30 IST
Last Updated 24 ಜನವರಿ 2023, 19:30 IST
ಸುದ್ದಿಗೋಷ್ಠಿಯಲ್ಲಿ ವಿನಯಕುಮಾರ್‌ ಮಾತನಾಡಿದರು. ಮಹಮ್ಮದ್‌ ಮುಜಾಬಿನ್ ಹಾಗೂ ಎಲ್‌.ಕೆ.ಮೋನು ಇದ್ದಾರೆ– ಪ್ರಜಾವಾಣಿ ಚಿತ್ರ
ಸುದ್ದಿಗೋಷ್ಠಿಯಲ್ಲಿ ವಿನಯಕುಮಾರ್‌ ಮಾತನಾಡಿದರು. ಮಹಮ್ಮದ್‌ ಮುಜಾಬಿನ್ ಹಾಗೂ ಎಲ್‌.ಕೆ.ಮೋನು ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ಪರಿಸರ ಸ್ನೇಹಿ ಇ–ಆಟೊ ರಿಕ್ಷಾಗಳ ಬಳಕೆಗೆ ನೆರವಾಗುವ ಸಲುವಾಗಿ ವಿನಯ್‌ ಕುಮಾರ್‌ ಜಿ.ವಿ. ಅವರು ಒನ್‌ಸಿಟಿ ಟೆಕ್ನಾಲಜೀಸ್‌ ಸಂಸ್ಥೆಯ ಸಹಯೋಗದಲ್ಲಿ ‘ಗ್ರೀನ್‌ ನಾಟ್‌’ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಂಗಳವಾರ ಮಾಹಿತಿ ನೀಡಿದ ವಿನಯ ಕುಮಾರ್‌, ‘ಉಬರ್, ಒಲಾ ಆ್ಯಪ್‌ಗಳ ಮಾದರಿಯಲ್ಲೇ ಕಾರ್ಯಾಚರಿಸುವ ಈ ಆ್ಯಪ್‌ ಇ–ಆಟೊ ರಿಕ್ಷಾಗಳ ಬಳಕೆಗೆ ನೆರವಾಗಲಿದೆ. ಮನೆ ಬಾಗಿಲಿಗೆ ಇ–ಆಟೊರಿಕ್ಷಾಗಳನ್ನು ಈ ಆ್ಯಪ್‌ ಮೂಲಕ ಕರೆಸಬಹುದು. ಬಾಡಿಗೆ ಪಾವತಿಯೂ ಸುಲಭ’ ಎಂದರು.

‘ಈ ಆ್ಯಪ್‌ ಬಳಸುವ ಇ–ಆಟೊ ರಿಕ್ಷಾ ಚಾಲಕರಿಗೆ ಯಾವುದೇ ದರ ವಿಧಿಸುವುದಿಲ್ಲ. ಪ್ರಯಾಣಿಕರಿಂದ ಅಲ್ಪ ಪ್ರಮಾಣದ ಸೇವಾಶುಲ್ಕ ಪಡೆಯುತ್ತೇವೆ. ಇದರ ಬಳಕೆಯಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಪರಿಸರ ಸಂರಕ್ಷಣೆಯೂ ಆಗಲಿದೆ’ ಎಂದರು.

ADVERTISEMENT

‘ಒನ್‌ಸಿಟಿ ಟೆಕ್ನಾಲಜೀಸ್‌ನ ಎಲ್‌.ಕೆ.ಮೋನು, ‘ಗೂಗಲ್ ಪ್ಲೇಸ್ಟೋರ್‌ನಲ್ಲಿ ‘ಗ್ರೀನ್‌ ನಾಟ್‌’ ಆ್ಯಪ್‌ ಲಭ್ಯ ಇದೆ. ಶೀಘ್ರವೇ ಆ್ಯಪ್ ಸ್ಟೋರ್‌ನಲ್ಲೂ ಸಿಗಲಿದೆ’ ಎಂದರು. ಸಂಸ್ಥೆಯ ಮಹಮ್ಮದ್‌ ಮುಜಾಬಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.