ADVERTISEMENT

ವಿಟ್ಲ: ಸರ್ಕಾರಿ ಶಾಲೆಗೆ ಪೀಠೋಪಕರಣ ಹಸ್ತಾಂತರ

ಲಯನ್ಸ್ ಕ್ಲಬ್ ಜಿಲ್ಲಾ ಗವರ್ನನರ್ ಅಧಿಕೃತ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 7:29 IST
Last Updated 19 ಮಾರ್ಚ್ 2023, 7:29 IST
ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಮತ್ತು ಸೇವಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಮತ್ತು ಸೇವಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃರ ಭೇಟಿ ಮತ್ತು ಸೇವಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ ಲಯನ್ಸ್ ಸೇವಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿಟ್ಲ ಲಯನ್ಸ್ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ನಿರಂತರ ಸೇವೆ ನೀಡುತ್ತ ಜಿಲ್ಲೆಗೆ ಮಾದರಿ ಕ್ಲಬ್ ಆಗಿದೆ’ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಗವರ್ನರ್ ಡಾ. ಗೀತಾಪ್ರಕಾಶ್ ಮಾತನಾಡಿದರು.

ADVERTISEMENT

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವೇದಾವತಿ, ದೇಜಪ್ಪ ಪೂಜಾರಿ ನಿಡ್ಯ, ಸುರೇಖಾ, ಖುಷಿ ಸಾಲಿಯಾನ್, ಮುರಳೀಧರ, ನಿಕೀತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಆವತ್ತಿಕಲ್ಲು ಅಂಗಡಿವಾಡಿ ಕೇಂದ್ರಕ್ಕೆ ಜಲಜಾಕ್ಷಿ ಮತ್ತು ಬಾಲಕೃಷ್ಣ ಅವರಿಂದ ಮಿಕ್ಸರ್ ಕೊಡುಗೆ ನೀಡಲಾಯಿತು.ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಅವರ ಮೂಲಕ ಕೆಲಿಂಜ ಸರ್ಕಾರಿ ಶಾಲೆಗೆ ಪೀಠೋಪಕರಣ ವಿತರಿಸಲಾಯಿತು. ದಿ.ನಳಿನಿ ಅವರ ಸ್ಮರಣಾರ್ಥವಾಗಿ ಅವರ ಪತಿ ಮತ್ತು ಮಕ್ಕಳು ನೀಡಿದ ಸೇವಾ ಕೌಂಟರ್ ಅನ್ನು ವಿಟ್ಲ ಅಯ್ಯಪ್ಪ ದೇವಸ್ಥಾನಕ್ಕೆ ಹಸ್ತಾಂತರ ಮಾಡಲಾಯಿತು. ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ರಾಜೇಶ್ ತೋಡ್ಲಾ, ಪುಷ್ಪಲತಾ ಅವರ ನೀಡಿದ ಒಟ್ಟು ₹ 1.75 ಲಕ್ಷ ವೆಚ್ಚದ ಕಂಚಿನ ಹೊದಿಕೆ ನೀಡಲಾಯಿತು.

ಜಿಲ್ಲಾ ಲಯನ್ಸ್ ಕೊಡಂಗಾಯಿ ಸರ್ಕಾರಿ ಶಾಲೆಗೆ ಕಂಪ್ಯೂಟರ್, ರಜಿತ್ ಆಳ್ವ ಅವರಿಂದ ಪೀಠೋಪಕರಣ, ಅರವಿಂದ ರೈ ಮೂರ್ಜೆಬೆಟ್ಟು ಅವರಿಂದ ನಾಮಫಲಕ, ಲಯನ್ಸ್ ಕ್ಲಬ್ ವತಿಯಿಂದ ಕ್ಷಯರೋಗ ಪೀಡಿತರಿಗೆ ಪೌಷ್ಟಿಕ ಆಹಾರಗಳ ಕಿಟ್ ವಿತರಿಸಲಾಯಿತು.

ಲಯನ್ಸ್ ಉಪ ಗವರ್ನರ್ ಭಾರತಿ, ಡಾ. ಇರ್ಮಾಡಿ ಶರಚ್ಚಂದ್ರ ಶೆಟ್ಟಿ, ಪ್ರಾಂತಿಯ ಅಧ್ಯಕ್ಷ ಲಕ್ಷ್ಮಣ ಕುಲಾಲ್ ಅಗ್ರಬೈಲು, ವಲಯಾಧ್ಯಕ್ಷ ಶಿವಾನಂದ ನೂಜಿಪ್ಪಾಡಿ, ಪ್ರಗತಿ ಎಸ್, ಸಂಜೀತ್ ಶೆಟ್ಟಿ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಲಜಾಕ್ಷಿ, ಕೋಶಾಧಿಕಾರಿ ರವಿಶಂಕರ್ , ಲಿಯೊ ಕ್ಲಬ್ ಅಧ್ಯಕ್ಷೆ ಯುಕ್ತಾ ಇದ್ದರು.

ಮಂಗೇಶ್ ಭಟ್ ವಿಟ್ಲ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಸಿಂಧು ಶೆಟ್ಟಿ, ಲೂಯಿಸ್, ಗಂಗಾಧರ್ ವಿಟ್ಲ, ಮೋಹನ್ ಮಾಸ್ತರ್, ದೇವಿಪ್ರಸಾದ್ ಶೆಟ್ಟಿ ವಿವಿಧ ಜವಾಬ್ದಾರಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.