ADVERTISEMENT

ಉಪ್ಪಿನಂಗಡಿ: ಕಿರುಕುಳ ಆರೋಪ; ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 6:44 IST
Last Updated 29 ಜುಲೈ 2021, 6:44 IST

ಉಪ್ಪಿನಂಗಡಿ: ಸೇನಾ ನಿವೃತ್ತ ಉದ್ಯೋಗಿಯಿಂದ ಆಗುತ್ತಿರುವ ಕಿರುಕುಳದಿಂದ ಕುಟುಂಬವನ್ನು ಮುಕ್ತಗೊಳಿಸಿ ಎಂದು ವಿನಂತಿಸಿ ಮಹಿಳೆಯೊಬ್ಬರು ಪುತ್ತೂರು ಡಿವೈಎಸ್ಪಿಗೆ ದೂರು ನೀಡಿದ್ದಾರೆ.

ಇಳಂತಿಲ ಗ್ರಾಮದ ಮಹಿಳೆ ದೂರು ನೀಡಿದ್ದು, ‘ಏಪ್ರಿಲ್ 14ರಂದು ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಗೆರೆಟೆ ಸಂಗ್ರಹಿಸಲು ಹೋಗಿದ್ದ ವೇಳೆ ಸಮೀಪದ ನಿವಾಸಿ ಸೇನಾ ನಿವೃತ್ತ ಉದ್ಯೋಗಿ ಜಯ ಪೂಜಾರಿ ಎಂಬುವರು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ, ನಿರಂತರ ಕೆಲ್ಲೆಸೆದು ಕಣ್ಣಿಗೆ ಗಾಯಗೊಳಿಸಿದ್ದಾರೆ. ಸುದೀರ್ಘ ಚಿಕಿತ್ಸೆಯ ಬಳಿಕವೂ ದೃಷ್ಟಿ ಬಂದಿಲ್ಲ. ಆರೋಪಿ ಮದ್ಯವ್ಯಸನಿಯಾಗಿದ್ದು, ರಾತ್ರಿ ವೇಳೆ ಮನೆಗೆ ಬಂದು ಟಾರ್ಚ್ ಲೈಟ್ ಹಾಕುವುದು, ಅವ್ಯಾಚ ಪದಗಳಿಂದ ಬೈಯುವುದು ಮೊದಲಾದ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ನೀಡುವ ಕೃತ್ಯವನ್ನು ವಿಡಿಯೊ ಮೂಲಕ ದಾಖಲಿಸಿ ಸ್ಥಳೀಯ ಠಾಣೆಗೆ ದೂರು ನೀಡಿದ್ದರೂ ನ್ಯಾಯ ದೊರೆಯಲಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯ ಕಿರುಕುಳದಿಂದ ಕೃಷಿ ಮಾಡಲು ಆಗದೆ, ನಷ್ಟವಾಗಿದೆ. ಇಡೀ ಕುಟುಂಬ ಭಯದಲ್ಲಿ ಜೀವನ ನಡೆಸುವಂತಾಗಿದೆ. ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ವಿನಂತಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.