ADVERTISEMENT

ಹರಿದ್ವರ್ಣ ಕಿರುಚಿತ್ರ ಯು ಟ್ಯೂಬ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:48 IST
Last Updated 4 ನವೆಂಬರ್ 2025, 7:48 IST
0
0   

ಮಂಗಳೂರು: ಪರಿಸರದ ಕಥೆಯನ್ನು ಒಳಗೊಂಡಿರುವ ‘ಹರಿದ್ವರ್ಣ’ ಕಿರುಚಿತ್ರ ಯು ಟ್ಯೂಬ್‌ ಚಾನಲ್‌ ಶ್ರೀವರ ಸ್ಟುಡಿಯೊದಲ್ಲಿ ಬಿಡುಗಡೆಯಾಗಿದೆ ಎಂದು ಚಿತ್ರ ನಿರ್ಮಾಣ ತಂಡದ ಸಲಹೆಗಾರ ಕೇಶವ ರಾಮಕುಂಜ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್–19ರ ಸಂದರ್ಭದಲ್ಲಿ ಆಮ್ಲಜನಕ ಮತ್ತು ಉಸಿರಿಗಾಗಿ ಒದ್ದಾಡಿದವರನ್ನು ಕಂಡ ನಂತರ ಪರಿಸರ ಉಳಿಸುವುದರ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿತ್ತು. ಅದೇ ಸಂದೇಶ ಚಿತ್ರದಲ್ಲಿದೆ. ಶಾಲೆ ಮತ್ತು ಸಂಘ ಸಂಸ್ಥೆಗಳಲ್ಲಿ ಈಗಾಗಲೇ 17 ಪ್ರದರ್ಶನ ಕಂಡಿದೆ ಎಂದರು.

ಶ್ರದ್ಧಾ ಕೇಶವ ರಾಮಕುಂಜ ನಿರ್ಮಿಸಿರುವ ಚಿತ್ರವನ್ನು ಚೇತನ್ ಕೆ.ವಿಟ್ಲ ನಿರ್ದೇಶಿಸಿದ್ದಾರೆ. ಮಗಳು ಕಸ್ವಿಯ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ಆರಂಭಗೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಈವರೆಗೆ 500ಕ್ಕೂ ಅಧಿಕ ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳ ಜನ್ಮದಿನದ ಅಂಗವಾಗಿ ಗಿಡ ನೆಡುವ ಪಾಲಕರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ADVERTISEMENT

ಶ್ರದ್ಧಾ ಮತ್ತು ಚೇತನ್‌ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.