ADVERTISEMENT

ಕುಮಾರಸ್ವಾಮಿ ಪಕ್ಷ ಜೋಕರ್‌ ಇದ್ದ ಹಾಗೆ: ಸಚಿವ ಸಿ.ಪಿ.ಯೋಗೀಶ್ವರ್ ಲೇವಡಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 11:49 IST
Last Updated 26 ಫೆಬ್ರುವರಿ 2021, 11:49 IST
ಸಚಿವ ಸಿ.ಪಿ.ಯೋಗೀಶ್ವರ್
ಸಚಿವ ಸಿ.ಪಿ.ಯೋಗೀಶ್ವರ್   

ಮಂಗಳೂರು: ‘ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪಕ್ಷ ಜೋಕರ್ ಇದ್ದ ಹಾಗೆ. ಯಾರ ಜತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ’ ಎಂದು ಸಚಿವ ಸಿ.ಪಿ.ಯೋಗೀಶ್ವರ್ ಲೇವಡಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿಯವರಿಗೆ ರಾಜಕೀಯ ನೈತಿಕತೆ, ಸಿದ್ಧಾಂತ ಏನೂ ಇಲ್ಲ. ಎಲ್ಲಿ ಅವಕಾಶ ಸಿಗುತ್ತದೆ ಅಲ್ಲಿ ಹೋಗುತ್ತಾರೆ. ಅವರದ್ದು ಅವಕಾಶವಾದಿ ರಾಜಕಾರಣ’ ಎಂದರು.

‘ಅವರು ಮುಖ್ಯಮಂತ್ರಿ ಆಗಿದ್ದಾಗ ಉದಾಸೀನದಿಂದ ಕಾಲ ಕಳೆದರು. ಈಗ ಆತಂಕ ಕಾಡುತ್ತಿದೆ. ಅದಕ್ಕಾಗಿ ಕ್ಷೇತ್ರದ ಭೇಟಿ ಮಾಡಿ ಗೋಳಾಡುತ್ತಿದ್ದಾರೆ. ಅಧಿಕಾರ ಇಲ್ಲದಾಗ ಜನರ ಬಳಿಗೆ ಹೋಗುವುದು ಅವರ ಗುಣ’ ಎಂದ ಅವರು, ‘ಮುಂದಿನ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಬಹುಪಾಲು ಶಾಸಕರು ಆಯ್ಕೆಯಾಗಲಿದ್ದಾರೆ. ಜೆಡಿಎಸ್ ನೆಲಕಚ್ಚಲಿದೆ ಎಂಬ ಆತಂಕ ಕುಮಾರಸ್ವಾಮಿ ಅವರಿಗಿದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.