ADVERTISEMENT

ದಕ್ಷಿಣ ಕನ್ನಡ | ಸುರತ್ಕಲ್‌ನಲ್ಲಿ 29.6 ಸೆಂ.ಮೀ ಮಳೆ: ಶಾಲಾ, ಕಾಲೇಜಿಗೆ ರಜೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 2:29 IST
Last Updated 17 ಜುಲೈ 2025, 2:29 IST
<div class="paragraphs"><p>ಆರ್ಯ ಸಮಾಜ ರಸ್ತೆಯಲ್ಲಿ ಮನೆಯೊಂದರ ಕಾಂಪೌಂಡ್ ಕುಸಿದಿದ್ದು, ಮನೆ ಅಪಾಯದಲ್ಲಿದೆ</p></div>

ಆರ್ಯ ಸಮಾಜ ರಸ್ತೆಯಲ್ಲಿ ಮನೆಯೊಂದರ ಕಾಂಪೌಂಡ್ ಕುಸಿದಿದ್ದು, ಮನೆ ಅಪಾಯದಲ್ಲಿದೆ

   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಸುರತ್ಕಲ್‌ನಲ್ಲಿ 29.6 ಸೆಂ.ಮೀ ಮಳೆ ದಾಖಲಾಗಿದೆ.

ಉಡುಪಿ ಜಿಲ್ಲೆಯ ಕಾಪು ತೆಂಕದಲ್ಲಿ 27.7 ಸೆಂ.ಮೀ, ಹೆಜಮಾಡಿಯಲ್ಲಿ 27.1 ಸೆಂ.ಮೀ, ಮಂಗಳೂರಿನ ಬಾಳದಲ್ಲಿ 26.7 ಸೆಂ.ಮೀ, ಉಳ್ಳಾಲದಲ್ಲಿ 26 ಸೆಂ.ಮೀ, ಕೋಟೆಕಾರ್ ನಲ್ಲಿ 21.1 ಸೆಂ.ಮೀ, ಕಿನ್ಯದಲ್ಲಿ 20.8 ಸೆಂ.ಮೀ, ಎಕ್ಕಾರು 20.6 ಸೆಂ.ಮೀ ಮಳೆ ದಾಖಲಾಗಿದೆ.‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 38 ಸ್ಥಳಗಳಲ್ಲಿ 15 ಸೆಂ.ಮೀ.ಗೂ ಅಧಿಕ‌ ಮಳೆ ದಾಖಲಾಗಿದೆ‌.

ADVERTISEMENT

ಜಿಲ್ಲೆಯಲ್ಲಿ ಗುರುವಾರ ಎಲ್ಲ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಂಗಳೂರಿನಲ್ಲಿ ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ‌. ಗುರುವಾರ ಬೆಳಿಗ್ಗೆ ಮಳೆ ಕೊಂಚ ತಗ್ಗಿದ್ದು, ದಟ್ಟ‌ಮೋಡ ಕವಿದ ವಾತಾವರಣ ಇದೆ.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಮಳೆಯಿಂದ ಹಾನಿಯಾಗಿರುವ ಬಿಜೈ ಬಟ್ಟಗುಡ್ಡ, ಮಾಲೆಮಾರ್, ಕಾವೂರು ಉಲ್ಲಾಸ ನಗರ, ಆರ್ಯ ಸಮಾಜ ರಸ್ತೆ, ಕೊಟ್ಟಾರಚೌಕಿ ಮತ್ತಿತರ ಕಡೆಗಳಿಗೆ ಬುಧವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.