ಪ್ರಾತಿನಿಧಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಆಗಾಗ ಬಿಡುವು ಕೊಟ್ಟು ರಭಸದ ಮಳೆಯಾಗುತ್ತಿದೆ.
ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ತಾಸುಗಳಲ್ಲಿ ಉಳ್ಳಾಲ ತಾಲ್ಲೂಕಿನ ಕೋಟೆಕಾರ್ ನಲ್ಲಿ 12.8 ಸೆಂ. ಮೀ ಮಳೆಯಾಗಿದೆ.
ಕೀನ್ಯಾದಲ್ಲಿ 10.4 ಸೆಂ.ಮೀ, ಮುನ್ನೂರಿನಲ್ಲಿ 9.8 ಸೆಂ.ಮೀ, ಬಂಟ್ವಾಳ ತಾಲ್ಲೂಕಿನ ಮಂಚಿಯಲ್ಲಿ 9.5 ಸೆಂ.ಮೀ, ಪುಣಚದಲ್ಲಿ 9.2 ಸೆಂ.ಮೀ, ಬಂಟ್ವಾಳದಲ್ಲಿ 8.9 ಸೆಂ.ಮೀ, ವಿಟ್ಲಪಡ್ನೂರಿನಲ್ಲಿ 8.7 ಸೆಂ.ಮೀ, ಬಾಳ್ತಿಲದಲ್ಲಿ 8.6 ಸೆಂ.ಮೀ, ಮೇರಮಜಲಿನಲ್ಲಿ 8.5 ಸೆಂ.ಮೀ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ ಡಿಎಂಸಿ) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.