ADVERTISEMENT

ಕರಾವಳಿಯಲ್ಲಿ ಧಾರಾಕಾರ ಮಳೆ: ಉಳ್ಳಾಲದಲ್ಲಿ ಹಲವು ಮನೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 7:18 IST
Last Updated 5 ಜುಲೈ 2022, 7:18 IST
ಭಾರೀ ಮಳೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯ ಹಲವು ಪ್ರದೇಶಗಳು ಜಲಾವೃತ
ಭಾರೀ ಮಳೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯ ಹಲವು ಪ್ರದೇಶಗಳು ಜಲಾವೃತ   

ಉಳ್ಳಾಲ: ಭಾರೀ ಮಳೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯ ಹಲವು ಪ್ರದೇಶಗಳು ಜಲಾವೃತಗೊಂಡಿದೆ.

ತಲಪಾಡಿ ದೇವಿಪುರ, ಕೋಟೆಕಾರು ವೈದ್ಯನಾಥನಗರದಲ್ಲಿ ಹಲವು ಮನೆಗಳು, ರಸ್ತೆಗಳು ಜಲಾವೃತ ಗೊಂಡಿದ್ದು, ಕಳೆದ 25 ವರ್ಷಗಳ ನಂತರ ದೇವಿಪುರ ರಸ್ತೆ ಜಲಾವೃತಗೊಂಡಿದೆ.

ಮಾಡೂರು ಬಳಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿ, ಬೀರಿಯಿಂದ ದೇರಳಕಟ್ಟೆ ಸಂಪರ್ಕಿಸುವ ರಸ್ತೆ ಸಂಚಾರಅಸ್ತವ್ಯಸ್ತವಾಗಿದೆ.

ADVERTISEMENT

ಹಲವೆಡೆ ವಿದ್ಯುತ್ ಕೇಬಲ್ ಲೈನ್ ‌ಮೇಲೆ ಮರಗಳು ಉರುಳಿ ಬಿದ್ದು ವಿದ್ಯುತ್ ಸಂಚಾರ ವ್ಯತ್ಯಯ, ಸೋಮೇಶ್ವರ ಒಂಭತ್ತುಕೆರೆಯ ಭಾಗದಲ್ಲಿಯೂ ಮನೆಗಳು ಜಲಾವೃತಗೊಂಡಿದೆ.

ಉಳ್ಳಾಲ ಗ್ರಾಮದ ಹಳೇಕೋಟೆ ಎಂಬಲ್ಲಿ ಗುಡ್ಡೆ ಜರಿದ ಪರಿಣಾಮವಾಗಿ ಅಬ್ದುಲ್ ರೆಹಮಾನ್ ಎಂಬುವರ ಮನೆಗೆ ತೆಂಗಿನ ಮರ ಬಿದ್ದು ತೀವ್ರ ಹಾನಿಯಾಗಿರುತ್ತದೆ. ಸಂಬಂಧಪಟ್ಟ ಮನೆಯವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.

ಪೆರ್ಮನ್ನೂರು ಗ್ರಾಮದ ಕಲ್ಲಪು ಬಳಿ ಕೃತಕ‌ನೆರೆಯಿಂದ 20 ಮನೆಗಳು ಜಲಾವೃತಗೊಂಡಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.