
ಪ್ರಜಾವಾಣಿ ವಾರ್ತೆ
ಪುತ್ತೂರು: ತಾಲ್ಲೂಕಿನ ವಿವಿಧೆಡೆ ಶನಿವಾರ ಭಾರಿ ಮಳೆಯಾಗಿದ್ದು, ನಿಡ್ಪಳ್ಳಿ ಗ್ರಾಮದಲ್ಲಿ ದೇವಸ್ಥಾನವೊಂದರ ಮುಂಭಾಗದ ಅಂಗಣದ ಬದಿಯ ಆವರಣಗೋಡೆ ಕುಸಿದಿದೆ.
ಪುತ್ತೂರು ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶನಿವಾರ ಬೆಳಿಗ್ಗೆ ಆರಂಭಗೊಂಡ ಜಡಿ ಮಳೆ ಸಂಜೆ ವರೆಗೂ ಮುಂದುವರಿದಿತ್ತು.
ನಿಡ್ಪಳ್ಳಿಯಲ್ಲಿರುವ ಶಾಂತದುರ್ಗಾ ದೇವಸ್ಥಾನದ ಅಂಗಣದ ಬದಿ ರಸ್ತೆ ಪಕ್ಕದಲ್ಲಿ ಕೆಂಪು ಕಲ್ಲಿನಿಂದ ನಿರ್ಮಿಸಿದ್ದ ಆವರಣಗೋಡೆ ಸಂಪೂರ್ಣವಾಗಿ ಕುಸಿದಿದೆ.
ತೋಡು-ಹೊಳೆಗಳಲ್ಲಿ ತುಂಬಿ ಹರಿದಿದ್ದು, ಸಂಜೆ ವೇಳೆಗೆ ಮಳೆಯ ಅಬ್ಬರ ಕಡಿಮೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.