ADVERTISEMENT

ಗಾಳಿ: ಮೀನುಗಾರಿಕೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 1:06 IST
Last Updated 8 ಸೆಪ್ಟೆಂಬರ್ 2020, 1:06 IST

ಮಂಗಳೂರು: ಈ ವರ್ಷದ ಮೀನುಗಾರಿಕಾ ಋತು ಶುರುವಾಗಿದ್ದರೂ, ಪೂರ್ಣ ಪ್ರಮಾಣದ ಮೀನುಗಾರಿಕೆಗೆ ಪದೇ ಪದೇ ಅಡ್ಡಿ ಉಂಟಾಗುತ್ತಿದೆ.

ಕೋವಿಡ್‌–19 ಕಾರಣ ಈ ಬಾರಿ ಒಂದು ತಿಂಗಳು ವಿಳಂಬವಾಗಿ ಸೆ.1 ಕ್ಕೆ ಮೀನುಗಾರಿಕೆ ಆರಂಭಗೊಂಡಿತ್ತು. ಆ ಬಳಿಕವೂ ಹೊರ ರಾಜ್ಯದ ಮೀನುಗಾರರು ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ಬಾರದ ಕಾರಣ ಶೇ 50ರಷ್ಟು ಬೋಟ್‌ಗಳು ಸಮುದ್ರಕ್ಕೆ ಇಳಿಯಲು ಸಾಧ್ಯವಾಗಿಲ್ಲ.

ಈ ನಡುವೆಯೇ ಕಳೆದೆರಡು ದಿನ ವಾಯುಭಾರ ಕುಸಿತದ ಪರಿಣಾಮ ಗಾಳಿಯಿದ್ದು, ಬೋಟ್‌ಗಳು ತೆರಳಿಲ್ಲ.

ADVERTISEMENT

ಇದರಿಂದಾಗಿ, ಮಂಗಳೂರಿನ ತೀರದಲ್ಲಿ ಕಾರ್ಯಾಚರಿಸುವ 1,250 ಟ್ರಾಲ್ ಬೋಟ್‌ಗಳ ಪೈಕಿ ಶೇ 50ರಷ್ಟೂ ಇನ್ನೂ ಸಮುದ್ರಕ್ಕಿಳಿದಿಲ್ಲ.

‌‘ಭಾರಿ ಗಾಳಿ ಕಾರಣ ಪರ್ಸೀನ್‌ ಬೋಟ್‌ಗಳ ಮೂಲಕ ಮೀನುಗಾರಿಕೆ ಕಷ್ಟಸಾಧ್ಯವಾಗಿದೆ’ ಎಂದು ಟ್ರಾಲ್ ಬೋಟ್‌ ಮಾಲೀಕರ ಸಂಘದ ಅಧ್ಯಕ್ಷ ನಿತಿನ್ ಕುಮಾರ್‌ ತಿಳಿಸಿದರು. ಅಲ್ಲದೇ, ಟ್ರಾಲ್ ಬೋಟ್‌ಗಳೂ ಹೊಸದಾಗಿ ಹೊರಟಿಲ್ಲ. ಸೆ.9ರ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.