ADVERTISEMENT

ಅಶಕ್ತರಿಗೆ ಸಹಾಯ ಮಾಡಿ: ಪೊಲೀಸ್ ಆಯುಕ್ತ ಶಶಿ ಕುಮಾರ್

ಯಕ್ಷಧ್ರುವ: ಕಲಾವಿದರಿಗೆ ದಿನಸಿ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 12:58 IST
Last Updated 12 ಜೂನ್ 2021, 12:58 IST
ಮಂಗಳೂರಿನ ಕದ್ರಿ ಗೋಕುಲ್ ಸಭಾಭವನದಲ್ಲಿ ಶನಿವಾರ ತುಳು ನಾಟಕ ಕಲಾವಿದರ ಒಕ್ಕೂಟ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ , ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್, ಫ್ರೆಂಡ್ಸ್ ತುಳುವೆರ್ ಕುವೈತ್‌ ಆಶ್ರಯದಲ್ಲಿ ನಾಟಕ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ನಡೆಯಿತು.
ಮಂಗಳೂರಿನ ಕದ್ರಿ ಗೋಕುಲ್ ಸಭಾಭವನದಲ್ಲಿ ಶನಿವಾರ ತುಳು ನಾಟಕ ಕಲಾವಿದರ ಒಕ್ಕೂಟ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ , ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್, ಫ್ರೆಂಡ್ಸ್ ತುಳುವೆರ್ ಕುವೈತ್‌ ಆಶ್ರಯದಲ್ಲಿ ನಾಟಕ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ನಡೆಯಿತು.   

ಮಂಗಳೂರು: ‘ಕಲಾವಿದರು, ದಿನಗೂಲಿ ಕಾರ್ಮಿಕರು, ಸಣ್ಣ ಸಣ್ಣ ಕೆಲಸ ಮಾಡುವವರು, ಕಲಾವಿದರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಶಿಕ್ಷಕರು, ಶಿಕ್ಷಣ ಕ್ಷೇತ್ರದವರು ಭಾರಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಸಾಮರ್ಥ್ಯ ಇದ್ದವರು ಇಲ್ಲದವರಿಗೆ ಸಹಾಯ ಮಾಡಿ. ಇದು ನಿಮ್ಮನ್ನು ಕಾಯುತ್ತದೆ’ ಎಂದು ನಗರ ಪೋಲಿಸ್ ಕಮಿಷನರ್ ಎನ್. ಶಶಿಕುಮಾರ್ ಸಲಹೆ ನೀಡಿದರು.

ತುಳು ನಾಟಕ ಕಲಾವಿದರ ಒಕ್ಕೂಟ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ , ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್, ಫ್ರೆಂಡ್ಸ್ ತುಳುವೆರ್ ಕುವೈತ್‌ ಆಶ್ರಯದಲ್ಲಿ ಕದ್ರಿಯ ಗೋಕುಲ್ ಸಭಾಭವನದಲ್ಲಿ ಶನಿವಾರ ಜರುಗಿದ ನಾಟಕ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯತ್ವ ತೋರುವ ಸಮಯ’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನನಿತ್ಯ ಎನ್ನುವಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಇಲ್ಲಿನ ಕಲಾಪೋಷಕರು ಕೂಡ ಕಲಾವಿದರ ಜೊತೆಯಲ್ಲಿದ್ದಾರೆ. ಇದೊಂದು ಮಹಾಮಾರಿಯ ಸಂದರ್ಭದಲ್ಲಿ ನಾವು ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಂಘರ್ಷವಾಗಿದೆ. ಎಲ್ಲರೂ ಸಂತೋಷವಾಗಿದ್ದಾಗ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಈಗ ಎಲ್ಲರೂ ದುಃಖದಲ್ಲಿದ್ದಾಗ ಕಲಾವಿದರು ಮಾಡುವುದಾದರೂ ಏನು? ಕಲಾವಿದರನ್ನು ರಕ್ಷಿಸುವ ಸಂಘಟನೆಗಳು ಇನ್ನಷ್ಟು ಬೆಳೆಯಬೇಕು. ಜಾತಿ ಧರ್ಮ ರಾಜಕೀಯ ಬಿಟ್ಟು ಮನುಷ್ಯತ್ವಕ್ಕೆ ಬೆಲೆ ಸಿಗುವ ಸಮಯ ಇದು’ ಎಂದು ಪೋಲಿಸ್ ಕಮಿಷನರ್ ಎನ್. ಶಶಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಹಿರಿಯ ರಂಗಕರ್ಮಿ ಲಕ್ಷ್ಮಣ ಕುಮಾರ್ ಮಲ್ಲೂರು ಪ್ರಸ್ತಾವಿಕ ಮಾತಾಡಿ , ಯಕ್ಷಗಾನ ಕಲಾವಿದರು ಬಹಳಷ್ಟು ಸಂಕಷ್ಟದಲ್ಲಿದ್ದರು. ಮಳೆಗಾಲದಲ್ಲಿ ಪ್ರದರ್ಶನವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಈ ವೇಳೆ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆ ಮಾಡುವ ಮೂಲಕ ಪಟ್ಲ ಸತೀಶ್ ಶೆಟ್ಟಿ ಕಲಾವಿದರ ಬೆಂಬಲಕ್ಕೆ ನಿಂತರು. ಈಗ ಯಕ್ಷಗಾನ, ನಾಟಕ ಕಲಾವಿದರು ನೆಮ್ಮದಿಯಿಂದ ಇರಬೇಕಾದರೆ ಪಟ್ಲ ಫೌಂಡೇಶನ್ ಟ್ರಸ್ಟ್ ಕಾರಣ. ಕಳೆದ ಲಾಕ್‌ಡೌನ್‌ ಸಂದರ್ಭದಲ್ಲೂ 300 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ್ದು ಈ ಬಾರಿಯೂ ಮುಂದುವರಿದಿದೆ’ ಎಂದರು.

ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ , ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಲಯನ್‌ ಕಿಶೋರ್ ಡಿ. ಶೆಟ್ಟಿ, ಲಯನ್ಸ್ ಉಪ ರಾಜ್ಯಪಾಲ ವಸಂತ ಶೆಟ್ಟಿ, ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಉಪಾಧ್ಯಕ್ಷ ಡಾ. ಮನು ರಾವ್, ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಜಗನ್ನಾಥ ಶೆಟ್ಟಿ ಬಾಳ, ರವಿಚಂದ್ರ ಶೆಟ್ಟಿ ಅಶೋಕ‌ನಗರ, ಗೋಕುಲ್ ಕದ್ರಿ, ಗೋಕುಲ್ ಕದ್ರಿ,, ಪ್ರದೀಪ್ ಆಳ್ವ, ತಾರಾನಾಥ್ ಶೆಟ್ಟಿ ಬೋಳಾರ, ಲಕ್ಷ್ಮಣ ಕುಮಾರ್ ಮಲ್ಲೂರು, ಕ್ಯಾಟ್ಕಾ ಅಧ್ಯಕ್ಷ ಮೋಹನ್ ಕೊಪ್ಪಲ, ಮಧು ಸುರತ್ಕಲ್, ಗೋವರ್ಧನ್ ಶೆಟ್ಟಿ, ಸ್ವರೂಪ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.