
ಮಂಗಳೂರು: ಹಿಂದಿ ಅವಶ್ಯಕ ವ್ಯಾವಹಾರಿಕ ಭಾಷೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಸಂಸ್ಥೆಯ 80ನೇ ವಾರ್ಷಿಕೋತ್ಸವವನ್ನು ಶನಿವಾರ ಇಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 80 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹಿಂದಿ ಪ್ರಚಾರ ಸಮಿತಿ ಆರಂಭ ಗೊಂಡಿದ್ದು, ಸಮಿತಿಯಲ್ಲಿ ಇದ್ದ ಹಲವು ವ್ಯಕ್ತಿಗಳು ನಗರದಲ್ಲಿ ಹಿಂದಿ ಭಾಷೆಯನ್ನು ಬೆಳೆಸಲು ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ. ದೂರದರ್ಶನ ಮಾಧ್ಯಮದ ಮೂಲಕ ಸಹ ಅನೇಕರು ಹಿಂದಿ ಭಾಷೆ ಕಲಿತಿದ್ದಾರೆ. ಹಿಂದಿ ಪ್ರಚಾರ ಸಮಿತಿಯ ನೂತನ ಕಟ್ಟಡಕ್ಕೆ ಸಹಕಾರ ನೀಡಲಾಗುವುದು ಎಂದರು.
ಎಂಆರ್‌ಪಿಎಲ್ ಅಧಿಕಾರಿ ಲಲಿತ್ ರಾಜ್ ಪುರೋಹಿತ್ ಮಾತನಾಡಿ, ಹಿಂದಿ ರಾಷ್ಟ್ರ ಭಾಷೆ ಮಾತ್ರವಲ್ಲದೆ, ಸರಳ ಭಾಷೆ ಕೂಡ ಆಗಿ ವೈವಿಧ್ಯತೆ ಹೊಂದಿದೆ ಎಂದರು.
ಕ್ಯಾಪ್ಟನ್ ಗಣೇಶ ಕಾರ್ಣಿಕ ಮಾತನಾಡಿ, ಮಂಗಳೂರಿನ ಹಿಂದಿ ಪ್ರಚಾರ ಸಮಿತಿ ಹಲವಾರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಂಗಳೂರಿನ ಜನರನ್ನು ಒಗ್ಗೂಡಿಸಿದ ವೇದಿಕೆ ಅಂದರೆ ತಪ್ಪಾಗಲಾರದು ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಅಧ್ಯಕ್ಷ ಮುರಳೀಧರ ನಾಯಕ, ಮಾಜಿ ಅಧ್ಯಕ್ಷ ರಾಮ್ ಮೋಹನ್ ರಾವ್, ಉದ್ಯಮಿ ಸಂಜೀವ ಶೆಟ್ಟಿ ಇದ್ದರು. ನಾಗರತ್ನ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು .ಪ್ರೊ ಸುಮತಿ ಸ್ವಾಗತಿಸಿದರು. ಪಿ.ವಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.