ADVERTISEMENT

ರಿಕ್ಷಾ ಚಾಲಕನ ಮೇಲೆ ಹೆಜ್ಜೇನು ದಾಳಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 5:01 IST
Last Updated 28 ಫೆಬ್ರುವರಿ 2025, 5:01 IST

ಪುತ್ತೂರು: ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿರುವ ಆಟೊ ರಿಕ್ಷಾ ಸರ್ವಿಸ್ ಶೋರೂಮ್ ಬಳಿ ಹೆಚ್ಚೇನು ದಾಳಿಯಿಂದಾಗಿ ಹಲವು ಮಂದಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಈ ಪೈಕಿ ರಿಕ್ಷಾ ಚಾಲಕರೊಬ್ಬರಿಗೆ ಗಂಭೀರ ಗಾಯಗಳಾಗಿದೆ.

ಸರ್ವೆ ಗ್ರಾಮದ ಭಕ್ತಕೋಡಿಯ ಪ್ರಕಾಶ್ ತೀವ್ರ ಗಾಯಗೊಂಡವರು.

ಪ್ರಕಾಶ್ ಅವರು ಆದರ್ಶ ಆಸ್ಪತ್ರೆಯ ಸಮೀಪ ರಿಕ್ಷಾದಲ್ಲಿ ಮಲಗಿದ್ದರು. ಈ ವೇಳೆ ಅಲ್ಲಿದ್ದವರ ಮೇಲೆ ಹೆಚ್ಚೇನು ದಾಳಿ ಮಾಡಿದೆ. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.