ADVERTISEMENT

ಫೆ.6ರಿಂದ ಮಂಗಳೂರುನಲ್ಲಿ ಇಚ್ಲಂಗೋಡು ಉರುಸ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:16 IST
Last Updated 1 ಫೆಬ್ರುವರಿ 2023, 5:16 IST
ಇಚ್ಲಂಗೋಡು ಉರುಸ್‌ನ ಆಹ್ವಾನ ಪತ್ರಿಕೆಯನ್ನು ಮಹಮ್ಮದ್‌ ಇರ್ಷಾದ್‌ ಪೈಝಿ  ಬಿಡುಗಡೆ ಮಾಡಿದರು– ಪ್ರಜಾವಾಣಿ ಚಿತ್ರ
ಇಚ್ಲಂಗೋಡು ಉರುಸ್‌ನ ಆಹ್ವಾನ ಪತ್ರಿಕೆಯನ್ನು ಮಹಮ್ಮದ್‌ ಇರ್ಷಾದ್‌ ಪೈಝಿ  ಬಿಡುಗಡೆ ಮಾಡಿದರು– ಪ್ರಜಾವಾಣಿ ಚಿತ್ರ   

ಮಂಗಳೂರು: ಕಾಸರಗೋಡು ಜಿಲ್ಲೆಯ ಇಚ್ಲಂಗೊಡು ಹಜರತ್‌ ರಾಫಿ ಇಬ್ನ್‌ ಹಬೀಬ್‌ ಮಲಿಕ್‌ ದೀನಾರ್‌ ಉರುಸ್‌ ಇದೇ 6ರಿಂದ 26ರವರೆಗೆ ನಡೆಯಲಿದೆ ಎಂದು ಇಚ್ಲಂಗೋಡು ಮಸೀದಿಯ ಖತೀಬ ಮಹಮ್ಮದ್‌ ಇರ್ಷಾದ್‌ ಪೈಝಿ ತಿಳಿಸಿದರು.

ಇಲ್ಲಿ ಮಂಗಳವಾರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಇದೇ 3ರಂದು ತಂಙಳ್‌ ಮಖಾಂ ಝಿಯಾರತ್‌ ನಡೆಯಲಿದ್ದು, ಇಚ್ಲಂಗೋಡು ಜಮಾತ್‌ನ ಅಧ್ಯಕ್ಷ ಸೈಯದ್‌ ಕೆ.ಎಸ್‌.ಆಟ್ಟಕೋಯ ಚಾಲನೆ ನೀಡುವರು. ಸ್ಥಳೀಯ ಜಮಾತ್‌ ಅಧ್ಯಕ್ಷ ಅನ್ಸಾರ್‌ ಶೇರುಲ್‌ ಧ್ವಜಾರೋಹಣ ನೆರವೇರಿಸುವರು. ಫೆ. 6ರಿಂದ 26ರವರೆಗೆ ನಿತ್ಯವೂ ವಿವಿಧ ವಾಗ್ಮಿಗಳು ಪ್ರವಚನ ನೀಡುವರು’ ಎಂದರು.

‘ಫೆ. 6ರಂದು ರಾತ್ರಿ 8 ಗಂಟೆಗೆ ಪಾಣಕ್ಕಾಡ್‌ ಸೈಯದ್‌ ಬಷೀರಲಿ ಶಿಹಾಬ್‌ ತಂಙಳ್‌ ಉರುಸ್‌ ಅನ್ನು ಉದ್ಘಾಟಿಸುವರು. ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ಸಿ.ಮುಹಮ್ಮದ್‌ ಪೈಝಿ ಅಧ್ಯಕ್ಷತೆ ವಹಿಸುವರು. ಅಬ್ದುಲ್ ಜಲೀಲ್‌ ರಹ್ಮಾನಿ ವಾಣಿಯನ್ನೂರು ಉಪನ್ಯಾಸ ನೀಡುವರು. ಇದೇ 25ರಂದು ಸಮಾರೋಪ ಸಮಾರಂಭವನ್ನು ಸೈಯದ್‌ ಜೆಫ್ರಿ ಮುತ್ತುಕೋಯ ತಂಙಳ್‌ ಉದ್ಘಾಟಿಸುವರು. ಡಾ.ಎ.ಪಿ.ಅಬ್ದುಲ್‌ ಹಕೀಂ ಅಜ್ಝರಿ ಕಾಂತಪುರ ಮುಖ್ಯಭಾಷಣ ಮಾಡುವರು’ ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಅನ್ಸಾರ್‌ ಶೇರುಲ್‌, ಜಮಾತ್‌ ಕಾರ್ಯದರ್ಶಿ ಮಹ್ಮದ್‌ ಕುಟ್ಟಿ, ಉರುಸ್‌ ಸಂಚಾಲಕ ಹಸನ್‌ ಇಚ್ಲಂಗೊಡು, ಹನೀಫ್‌, ಮಜೀದ್‌ ಪಚ್ಚಂಬಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.