ADVERTISEMENT

‘ಅನಧಿಕೃತ ಮಾಂಸ ಮಾರಿದರೆ ಪರವಾನಗಿ ರದ್ದು’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 16:16 IST
Last Updated 23 ಅಕ್ಟೋಬರ್ 2020, 16:16 IST
ದಿವಾಕರ ಪಾಂಡೇಶ್ವರ
ದಿವಾಕರ ಪಾಂಡೇಶ್ವರ   

ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಮಾಂಸದ ಅಂಗಡಿಗಳಲ್ಲಿ ಬೇರೆ ರಾಜ್ಯ, ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡದಂತೆ ಮೇಯರ್‌ ದಿವಾಕರ ಪಾಂಡೇಶ್ವರ ಸೂಚನೆ ನೀಡಿದ್ದಾರೆ.

ಅನಧಿಕೃತವಾಗಿ ಈ ರೀತಿ ಮಾಂಸವನ್ನು ಮಾರಾಟ ಮಾಡಿರುವುದು ಕಂಡುಬಂದಲ್ಲಿ ಮಳಿಗೆಯ ಪರವಾನಗಿ ರದ್ದು ಮಾಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮಾಂಸದ ಮಾರಾಟಗಾರರು ಪಾಲಿಕೆಯ ಅಧೀನದಲ್ಲಿರುವ ಅಧಿಕೃತ ಕಸಾಯಿಖಾನೆಯಿಂದಲೇ ಮಾಂಸವನ್ನು ಪಡೆದು ಮಾರಾಟ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

ಎಲ್ಲ ಮಾಂಸದ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡಲು ಕಸಾಯಿಖಾನೆಯಿಂದ ಮಾಂಸವನ್ನು ಪಡೆದಾಗ, ಅದರ ವಿವರದ ರಶೀದಿಯನ್ನು ಕಡ್ಡಾಯವಾಗಿ ಇರಿಸಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಜಾನುವಾರನ್ನು ಕಸಾಯಿಖಾನೆಗೆ ಕೊಂಡೊಯ್ಯುವಾಗ ಸಾರಿಗೆ ಇಲಾಖೆಯಿಂದ ಅಧಿಕೃತವಾಗಿ ನೋಂದಣಿಗೊಂಡ ಸ್ಪೆಷಲ್ ಪರ್ಮಿಶನ್ ವೆಹಿಕಲ್‌(ಎಸ್‌ಪಿವಿ)ನಲ್ಲೇ ಸಾಗಿಸುವಂತೆ ಸಂಬಂಧಿತ ಕಸಾಯಿಖಾನೆ ಮಾಲೀಕರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.