ADVERTISEMENT

ಉಳ್ಳಾಲ ತಾಲ್ಲೂಕು ದಸರಾ ಕ್ರೀಡಾಕೂಟ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 13:51 IST
Last Updated 22 ಸೆಪ್ಟೆಂಬರ್ 2024, 13:51 IST
ಉಳ್ಳಾಲ ದಸರಾ ಕ್ರೀಡಾಕೂಟವನ್ನು ಪ್ರದೀಪ್ ಡಿಸೋಜ ಉದ್ಘಾಟಿಸಿದರು
ಉಳ್ಳಾಲ ದಸರಾ ಕ್ರೀಡಾಕೂಟವನ್ನು ಪ್ರದೀಪ್ ಡಿಸೋಜ ಉದ್ಘಾಟಿಸಿದರು   

ಮುಡಿಪು: ದುಶ್ಚಟಗಳಿಂದ ದೂರವಾಗಿ, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಜೀವನೋತ್ಸಾಹ ಬೆಳೆಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಹೇಳಿದರು.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಳ್ಳಾಲ ತಾಲ್ಲೂಕು ಪಂಚಾಯತಿ, ಪುರಸಸಭೆ, ನಗರ ಸಭೆ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಭಾನುವಾರ ನಡೆದ ಉಳ್ಳಾಲ ತಾಲ್ಲೂಕು ಮಟ್ಟದ‌ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಉಳ್ಳಾಲ ಕಾರ್ಯನಿರ್ವಹಣಾಧಿಕಾರಿ ಗುರುದತ್ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ದಸರಾ ಕ್ರೀಡಾಕೂಟದ ನೋಡಲ್ ಅಧಿಕಾರಿ ತ್ಯಾಗಂ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪರಿಸರವಾದಿ ಕೃಷ್ಣಪ್ಪ ಭಾಗವಹಿಸಿದ್ದರು.

ಕೊಣಾಜೆ ಪಿಡಿಒ ಮುತ್ತಪ್ಪ ಸ್ವಾಗತಿಸಿದರು. ಮಂಜನಾಡಿ ಪಿಡಿಒ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಪಜೀರು ಪಿಡಿಒ ಶ್ರೀಕಾಂತ್ ವಂದಿಸಿದರು.

400 ಮೀಟರ್ ಓಟದಲ್ಲಿ ವಿದ್ಯಾರ್ಥಿಗಳ ತಂಡ
ಕೊಣಾಜೆಯಲ್ಲಿ ಭಾನುವಾರ ನಡೆದ ಕೊಕ್ಕೊ ಟೂರ್ನಿಯಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಕುಂದರ್ ಪಾಲ್ಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.