ADVERTISEMENT

‘ನಮನ ತುಳುವ ನಲಿಕೆ’ ಆನ್‍ಲೈನ್ ಸ್ಪರ್ಧೆ: ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 12:35 IST
Last Updated 18 ಜುಲೈ 2021, 12:35 IST

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ದೇಶದ ಸ್ವಾತಂತ್ರ್ಯಅಮೃತ ಮಹೋತ್ಸವ ಪ್ರಯುಕ್ತ ತುಳು ಹಾಡಿನ ನೃತ್ಯದ ಆನ್‍ಲೈನ್ (ಯುಟ್ಯೂಬ್‌) ಸ್ಪರ್ಧೆ ‘ನಮನ ತುಳು ನಲಿಕೆ – 2021’ ಆಯೋಜಿಸಲಾಗಿದೆ. ವಿಜೇತರಿಗೆ ‘ನಮನ ತುಳುವ ನಲಿಕೆದ ಬೊಳ್ಳಿ’ ಸಂಘಟಕರ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ರೋಟರಿ ಕ್ಲಬ್ ಮೂಲ್ಕಿ, ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್‌ ಕ್ಲಬ್ ತೋಕೂರು, ಹಳೆಯಂಗಡಿ ಮತ್ತು ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ತುಳು ಹಾಡಿಗೆ ವೈಯಕ್ತಿಕ ನೃತ್ಯ ಮಾಡಿದ ಸ್ಪರ್ಧಾಳುವಿನ ಯಾವುದಾದರೂ ಒಂದು ವಿಡಿಯೊವನ್ನು ನೀವೇ ಮೊಬೈಲ್‍ನಲ್ಲಿ ಚಿತ್ರೀಕರಿಸಿ 7676761776 ಗೆ ವಾಟ್ಸ್‌ ಆ್ಯಪ್‌ ಮಾಡಿ. ತಂಡದ ನೃತ್ಯಕ್ಕೆ ಅವಕಾಶವಿಲ್ಲ. ಚಾನೆಲ್‌ಗೆ ಅಪ್‌ಲೋಡ್‌ ಮಾಡಿ ಲಿಂಕ್‌ ಅನ್ನು ಸ್ಪರ್ಧಿಗೆ ಕಳುಹಿಸಲಾಗುವುದು. ಸ್ಪರ್ಧಿ ಅದನ್ನು ಶೇರ್‌ ಮಾಡಬಹುದು. ಇಂಥ ನಿಮ್ಮ ವಿಡಿಯೊ ವೀಕ್ಷಣೆ(ವ್ಯೂ) ಸಂಖ್ಯೆ ಆಧರಿಸಿ ಬಹುಮಾನ ನಿರ್ಧರಿಸಲಾಗುವುದು.ಲೈಕ್ಸ್‌, ಕಾಮೆನ್ಟ್‌ಗಳಿಗೆ ಪ್ರಾಶಸ್ತ್ಯವಿಲ್ಲ.

1 ರಿಂದ 10 ವರ್ಷ, 10 ರಿಂದ 20 ವರ್ಷ ಮತ್ತು 20 ವರ್ಷ ಮೇಲ್ಪಟ್ಟ ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಪರ್ಧಿಗಳಿಗೆ ಮಾತ್ರ ಅವಕಾಶ. ಸ್ಪರ್ಧಾಳುವಿನ ಆಧಾರ್ ಕಾರ್ಡ್‍ನ ಪ್ರತಿಯನ್ನು ಕಳುಹಿಸಬೇಕು.
ಜುಲೈ 31ರ ಒಳಗೆ ವಿಡಿಯೊ ತಲುಪಿಸಬೇಕು. ಆಗಸ್ಟ್ 5 ರೊಳಗೆ ವಿಡಿಯೊ ಅಪ್‌ಲೋಡ್‌ ಆಗಲಿದ್ದು, ಆಗಸ್ಟ್‌ 20 ವರೆಗಿನ ವೀಕ್ಷಣೆ ಸಂಖ್ಯೆ ಪರಿಗಣಿಸಲಾಗುವುದು.

ADVERTISEMENT

ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ (9481977191), ಶಿವರಾಮ್ ಸುವರ್ಣ
ರೋಟರಿ ಕ್ಲಬ್ ಮೂಲ್ಕಿ (9964024502), ಸಂತೋಷ್ ದೇವಾಡಿಗ ತೋಕೂರು(9980425933) ನಾಗೆಶ್ ಕುಲಾಲ್ ಕುಳಾಯಿ( 6362384236) ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.