ADVERTISEMENT

ಮಂಗಳೂರು: 147 ಟನ್‌ ಆಮ್ಲಜನಕ ಹೊತ್ತು ತಂದ ‘ಶಾರ್ದೂಲ್‌’

​ಪ್ರಜಾವಾಣಿ ವಾರ್ತೆ
Published 25 ಮೇ 2021, 7:37 IST
Last Updated 25 ಮೇ 2021, 7:37 IST
147 ಟನ್ ದ್ರವೀಕೃತ ಆಮ್ಲಜನಕ, ಇತರ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ನೌಕಾಪಡೆಯ ಹಡಗು ಐಎನ್‌ಎಸ್‌ ಶಾರ್ದೂಲ್‌
147 ಟನ್ ದ್ರವೀಕೃತ ಆಮ್ಲಜನಕ, ಇತರ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ನೌಕಾಪಡೆಯ ಹಡಗು ಐಎನ್‌ಎಸ್‌ ಶಾರ್ದೂಲ್‌   

ಮಂಗಳೂರು: ಕುವೈತ್‌ನ ಇಂಡಿಯನ್ ಕಮ್ಯುನಿಟಿ ಸಪೋರ್ಟ್ ಗ್ರೂಪ್ (ಐಸಿಎಸ್ ಜಿ)ನಿಂದ ಭಾರತಕ್ಕೆ 147 ಟನ್ ದ್ರವೀಕೃತ ಆಮ್ಲಜನಕ, ಇತರ ವೈದ್ಯಕೀಯ ಸಾಮಗ್ರಿಗಳನ್ನು ನೀಡಲಾಗಿದೆ. ಈ ಸಾಮಗ್ರಿಗಳನ್ನು ಹೊತ್ತ ನೌಕಾಪಡೆಯ ಹಡಗು ಐಎನ್‌ಎಸ್‌ ಶಾರ್ದೂಲ್‌ ಮಂಗಳವಾರ ಬೆಳಿಗ್ಗೆ ಇಲ್ಲಿನ ಎನ್‌ಎಂಪಿಟಿಗೆ ಬಂದಿದೆ.

ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ನೀಡಲಾದ ಈ ನೆರವನ್ನು ರೆಡ್ ಕ್ರಾಸ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸ್ವೀಕರಿಸಿದೆ. ದ್ರವೀಕೃತ ಆಮ್ಲಜನಕ ಹೊಂದಿದ 11 ಟ್ಯಾಂಕ್‌ಗಳು, 2 ಸೆಮಿ ಟ್ರೇಲರ್‌ಗಳು, 1,200 ಆಕ್ಸಿಜನ್ ಸಿಲಿಂಡರ್‌ಗಳಿವೆ.

ರೆಡ್ ಕ್ರಾಸ್ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತರಾಮ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ, ರಾಜ್ಯ ನಿರ್ವಹಣಾ ಸಮಿತಿಯ ಸದಸ್ಯ ಯತೀಶ್ ಬೈಕಂಪಾಡಿ ಎನ್ಎಂಪಿಟಿಯಲ್ಲಿ ಈ ಸರಕು ಸ್ವೀಕರಿಸಿದರು.

ಎಡಿಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಸಿಪಿ ಮಹೇಶ್ ಕುಮಾರ್, ಕರಾವಳಿ ಕಾವಲು ಪಡೆ ಕಮಾಂಡರ್ ವೆಂಕಟೇಶ್ ಇದ್ದರು.

ADVERTISEMENT
ರೆಡ್ ಕ್ರಾಸ್ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತರಾಮ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ, ರಾಜ್ಯ ನಿರ್ವಹಣಾ ಸಮಿತಿಯ ಸದಸ್ಯ ಯತೀಶ್ ಬೈಕಂಪಾಡಿ ಎನ್ಎಂಪಿಟಿಯಲ್ಲಿ ಈ ಸರಕು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.