
ಪ್ರಜಾವಾಣಿ ವಾರ್ತೆ
ಸಾಂದರ್ಭಿಕ ಚಿತ್ರ
ಕಾಸರಗೋಡು: ತಾಯಿಯ ಎದೆಹಾಲು ಗಂಟಲಲ್ಲಿ ಸಿಲುಕಿ ಮಗುವೊಂದು ಮೃತಪಟ್ಟಿದೆ. ಮೊಗ್ರಾಲ್ ಪೇರಾಲ್ ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್-ಮರಿಯಮ್ಮತ್ ಸಾಬಿರಾ ದಂಪತಿ ಪುತ್ರ, 50 ದಿನಗಳ ಪ್ರಾಯದ ಲಸಿನ್ ಇಮಾತ್ ಮೃತಪಟ್ಟವ.
ಸೋಮವಾರ ರಾತ್ರಿ ಮನೆಯಲ್ಲಿ ಈ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ತಕ್ಷಣ ನಗರದ ಸರ್ಕಾರಿ ಜನರಲ್ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲಿ ಕೊನೆಯುಸಿರೆಳೆದಿದೆ.
2 ದಿನಗಳಲ್ಲಿ ಇಬ್ಬರ ಮಕ್ಕಳ ಬಲಿ:
ಒಂದೇ ರೀತಿಯ ಘಟನೆಯ ಪರಿಣಾಮ 2 ದಿನಗಳಲ್ಲಿ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಭಾನುವಾರ ರಾತ್ರಿ ಬೇಕಲ ಹದಾದ್ ನಗರ ನಿವಾಸಿ ಮುಹಮ್ಮದ್ ಹನೀಪ ಅವರ ಗಂಡು ಮಗು ತಾಯಿಯ ಎದೆಹಾಲು ಗಂಟಲಿಗೆ ಸಿಲುಕಿ ಮೃತಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.