ADVERTISEMENT

ಅಂತರರಾಷ್ಟ್ರೀಯ ಮಟ್ಟದ ವಿನ್ಯಾಸ ಸ್ಪರ್ಧೆ: ಶುಭಂ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 15:29 IST
Last Updated 7 ಜೂನ್ 2025, 15:29 IST
ಸುದ್ದಿಗೋಷ್ಠಿಯಲ್ಲಿ ಶುಭಂ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಶುಭಂ ಮಾತನಾಡಿದರು   

ಮಂಗಳೂರು: ಅಮೆರಿಕ ಕ್ಯಾಲಿಫೋರ್ನಿಯಾದ ಸ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ‘ಫ್ಲೊ’ ಸ್ಯಾನ್‌ಫೋರ್ಡ್ ಸೆಂಟರ್ ಆನ್ ಲಾಂಜಿಟಿವಿಟಿ, ಅಂತರರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯಲ್ಲಿ ಮಂಗಳೂರು ಬಿಜೈನ ಶುಭಂ ಆರ್. ವೆರ್ಣೇಕರ್ ಮತ್ತು ಕಾವ್ಯಶ್ರೀ ವೆಂಕಟೇಶ್ ತಂಡದವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸ್ಪರ್ಧೆಯ ಕುರಿತು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶುಭಂ, ‘ಏಪ್ರಿಲ್ ಅಂತ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ 31 ದೇಶಗಳ 500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಎಂಟು ತಂಡಗಳು ಆಯ್ಕೆಯಾಗಿದ್ದವು. ‘ಸುದೀರ್ಘ ಬದುಕಿಗಾಗಿ ಶಿಕ್ಷಣ ಮತ್ತು ಕಲಿಕೆಯ ಮರುಕಲ್ಪನೆ’ ಅಡಿಯಲ್ಲಿ ಸ್ಪರ್ಧೆಗಳು ನಡೆದಿದ್ದವು. ಒಂಬತ್ತು ಮಂದಿ ಅಂತರರಾಷ್ಟ್ರೀಯ ಮಟ್ಟದ ತೀರ್ಪುಗಾರರು ನಾವು ವಿನ್ಯಾಸ ಮಾಡಿದ್ದ ಕಾರ್ಡ್ ಆಧಾರಿತ ಗೇಮ್ ಅನ್ನು ಆಯ್ಕೆ ಮಾಡಿದ್ದಾರೆ’ ಎಂದರು.

ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಕಲಾ ಶಿಕ್ಷಕ ಜಾನ್‌ಚಂದ್ರನ್ ಮಾತನಾಡಿ, ‘ಶುಭಂ ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ. ಎನ್‌ಐಟಿಕೆ ಸುರತ್ಕಲ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿ, ಗುವಾಹಟಿ ಐಐಟಿಯಲ್ಲಿ ಡಿಸೈನಿಂಗ್‌ನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ’ ಎಂದರು.

ADVERTISEMENT

ಶುಭಂ ಪಾಲಕರಾದ ರಮೇಶ್ ವರ್ಣೇಕರ್, ಶೋಭಾ ವರ್ಣೇಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.