ಮಂಗಳೂರು: ದಕ್ಷಿಣ ಭಾರತದ ಟೈಕ್ಸ್‌ಟೈಲ್ ಬ್ರಾಂಡ್ ‘ಜಯಲಕ್ಷ್ಮೀ’ ಫ್ಯಾಮಿಲಿ ಫ್ಯಾಶನ್ ಸ್ಟೋರ್‌ನ ಬೃಹತ್ ಶೋರೂಂ ನಗರದ ಬಿಜೈನಲ್ಲಿ ಗುರುವಾರ ಆರಂಭವಾಯಿತು. ನೂತನ ಮಳಿಗೆಯನ್ನು ಮೇಯರ್ ದಿವಾಕರ ಪಾಂಡೇಶ್ವರ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘ಕೇರಳದಲ್ಲಿ 1947ರಲ್ಲಿ ನರಸಿಂಹ ಕಾಮತ್ ಅವರ ಮೂಲಕ ಸ್ಥಾಪನೆಗೊಂಡ ಜಯಲಕ್ಷ್ಮೀ ವಸ್ತ್ರಮಳಿಗೆ ಮಂಗಳೂರಿನಲ್ಲಿ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ, ರಾಜ್ಯದಲ್ಲೇ ಅತ್ಯಂತ ದೊಡ್ಡ ಮಳಿಗೆಯನ್ನು ಆರಂಭಿಸಿದೆ. ಇದು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿಗೆ ನೀಡಿದೆ ಕೊಡುಗೆಯಾಗಿದೆ. ಸುಮಾರು 400 ರಿಂದ 500 ಜನರಿಗೆ ಉದ್ಯೋಗ ದೊರೆತಿದೆ. ಎಲ್ಲರ ವಿಶ್ವಾಸ ಗಳಿಸಿ, ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕ ಜೆ.ಆರ್.ಲೋಬೊ, ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರವೂಫ್, ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಶಕಿಲಾ ಕಾವಾ, ಪೂರ್ಣಿಮಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುದರ್ಶನ್ ಉಪಸ್ಥಿತರಿದ್ದರು.
ಜಯಲಕ್ಷ್ಮೀ ಟೆಕ್ಸ್ ಟೈಲ್ಸ್ ಮಾಲೀಕರು ಹಾಗೂ ಪಾಲುದಾರರಾದ ಗೋವಿಂದ ಕಾಮತ್, ನಾರಾಯಣ ಕಾಮತ್, ಸತೀಶ್ ಕಾಮತ್ ಸ್ವಾಗತಿಸಿದರು. ಮಳಿಗೆಯ ಮಂಗಳೂರು ಶಾಖೆಯ ವ್ಯವಸ್ಥಾಪಕ ರಾಜೇಂದ್ರ ಉಳ್ಳಾಲ್ ವಂದಿಸಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿದರು.
ಬೃಹತ್ ಶೋರೂಂ
4 ಮಹಡಿಗಳ ಬೃಹತ್ ಶಾಪಿಂಗ್ ಮಾಲ್‌ನಲ್ಲಿ ಉತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವಿದೆ. ವಧುವಿನ ಸೀರೆಗಳು, ಡಿಸೈನರ್ ವೇರ್, ಜಂಟ್ಸ್ ಕಲೆಕ್ಷನ್ಸ್‌ನಿಂದ ಮಕ್ಕಳ ಉಡುಗೆಗಳವರೆಗೆ ನೂತನ ಕಲೆಕ್ಷನ್ ಜಯಲಕ್ಷ್ಮೀ ಫ್ಯಾಶನ್‌ನಲ್ಲಿ ಲಭ್ಯವಿದೆ.
ನೆಲ ಮಹಡಿಯಲ್ಲಿ ಚೂಡಿದಾರ್, ಚೂಡಿದಾರ್ ಮೆಟೀರಿಯಲ್ಸ್‌ಗಳು, ಡ್ರೆಸ್ ಮೆಟೀರಿಯಲ್ಸ್‌ಗಳು, ಎಥ್ನಿಕ್ ವೇರ್‌ಗಳು,
1ನೇ ಮಹಡಿಯಲ್ಲಿ ಮಕ್ಕಳ ಉಡುಗೆ ತೊಡುಗೆಗಳು, ಪಾಶ್ಚಿಮಾತ್ಯ ಉಡುಗೆ, 2ನೇ ಮಹಡಿಯಲ್ಲಿ ಪುರುಷರ ಉಡುಗೆ ತೊಡುಗೆಗಳು, ಬ್ಲೌಸ್ ಮೆಟೀರಿಯಲ್ಸ್, ಒಳ ಉಡುಪುಗಳು, 3ನೇ ಮಹಡಿಯಲ್ಲಿ ಲೆಹೆಂಗಾ ಮತ್ತು ಸೀರೆಗಳ ಸಂಗ್ರಹವಿದೆ.
ಕಾರು ಪಾರ್ಕಿಂಗ್‌ಗಾಗಿ ನೆಲಮಾಳಿಗೆಯಲ್ಲಿರುವ 2 ಮಹಡಿಗಳನ್ನು ಕಾಯ್ದಿರಿಸಿದ್ದು, ಇಲ್ಲಿ ಸುಮಾರು 250 ವಾಹನಗಳ ಪಾರ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಪುಟ್ಟ ಮಕ್ಕಳಿಗಾಗಿ ಮೋಜನ್ನು ನೀಡುವ ಸಲುವಾಗಿ ಮಕ್ಕಳ ಆಟದ ಸ್ಥಳವನ್ನು ಮೀಸಲಿರಿಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.