ಮಂಗಳೂರು: ‘ಮೂಲ್ಕಿ ತಾಲ್ಲೂಕಿನ ಬಳ್ಕುಂಜೆಯಲ್ಲಿ ಈಗಲೂ ಅಸ್ಪೃಶ್ಯತೆ ಜೀವಂತವಾಗಿದೆ’ ಎಂದು ಪರಿಶಿಷ್ಟ ಜಾತಿಯ ಮುಖಂಡರು ಅಧಿಕಾರಿಗಳ ಎದುರು ನೋವು ಹೇಳಿಕೊಂಡರು.
ಭಾನುವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಆಲಿಕೆ ಮಾಸಿಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.
ಮುಖಂಡ ಜಯ ಕಾಟಿಪಳ್ಳ, ‘ಮೇಲ್ಜಾತಿಯವರಿಗೆ ಸೇರಿದ ಬಾವಿಗಳಿಂದ ನೀರು ಸೇದಲು ಬಳಸುವ ಹಗ್ಗವನ್ನು ಪರಿಶಿಷ್ಟ ಸಮುದಾಯದವರು ಮುಟ್ಟಲೂ ಅವಕಾಶವಿಲ್ಲ’ ಎಂದರು.
ಮುಂದಿನ ಸಭೆ ಒಳಗೆ ಬಳ್ಕುಂಜೆಯಲ್ಲಿ ಪ್ರತ್ಯೇಕ ಸಭೆ ನಡೆಸಿ, ಚರ್ಚಿಸಲಾಗುವುದು ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್.ಎನ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.