ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿಯ ಅಪಾಯಕಾರಿ ಜಂಕ್ಷನ್‌ನ ಸಮಸ್ಯೆ ನಿವಾರಿಸಬೇಕು ಎಂದು ಜೀವನ್ ಶೆಟ್ಟಿ ಮನವಿ ಸಲ್ಲಿಸಿದರು
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಜಂಕ್ಷನ್‌ನಿಂದ ಕೊಲ್ನಾಡು ಜಂಕ್ಷನ್‌ವರೆಗೆ 5 ಅಪಾಯಕಾರಿ ವಲಯಗಳ ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಮೂಲ್ಕಿಯ ಎಂಜಿನಿಯರ್ ಮೂಲ್ಕಿ ಜೀವನ್ ಕೆ.ಶೆಟ್ಟಿ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಇಂಡಿಯನ್ ರೋಡ್ ಕಾಂಗ್ರೆಸ್‌ನ 82ನೇ ಸಭೆಯಲ್ಲಿ ಮನವಿ ಸಲ್ಲಿಸಿದರು.
ಗುಜರಾತ್ ಗಾಂಧಿ ನಗರದಲ್ಲಿ ನಡೆದ ಸಭೆಯಲ್ಲಿ ಮೂಲ್ಕಿಯ ಶಾರದಾ ಇನ್ಫ್ರಾ ಡಿಸೈನ್ ಇಂಡಿಯ ಸಂಸ್ಥೆಯ ಆಡಳಿತ ನಿರ್ದೇಶಕ , ಇಂಡಿಯನ್ ರೋಡ್ ಕಾಂಗ್ರೆಸ್ ಸದಸ್ಯ ಜೀವನ್ ಕೆ.ಶೆಟ್ಟಿ ಅವರು, ಅಪಾಯಕಾರಿ ವಲಯಗಳಲ್ಲಿ ಪರ್ಯಾಯವಾಗಿ ಅಂಡರ್ ಪಾಸ್ ಮತ್ತು ಬಪ್ಪನಾಡು ಶಾಂಭವಿ ಸೇತುವೆಯಿಂದ ಕೊಲ್ನಾಡು ಜಂಕ್ಷನ್‌ವರೆಗೆ ಸರ್ವಿಸ್ ರಸ್ತೆಯ ಅಗತ್ಯದ ಬಗ್ಗೆ ಪ್ರಸ್ತಾವಿಸಿದರು.
ಹೆದ್ದಾರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ನಿರ್ಮಲ್ ಅವರಿಗೆ ಮನವಿ ನೀಡಿದರು.
ಇದಕ್ಕೆ ಸ್ಪಂದಿಸಿದ ಅವರು ಎನ್‌ಎಚ್‌ಐಎ ಅಧ್ಯಕ್ಷರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಹೆದ್ದಾರಿ ಸಚಿವಾಲಯದ ಮುಖ್ಯ ಎಂಜಿನಿಯರ್ ಪಂಕಜ್ ಅಗರ್ವಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.