ADVERTISEMENT

ರೈಲು ನಿಲ್ದಾಣ ಸುಂದರ ತಾಣ

ಮೇಲ್ದರ್ಜೆಗೆ ಏರಿರುವ ಕಬಕ –ಪುತ್ತೂರು ರೈಲ್ವೆ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 3:31 IST
Last Updated 11 ಜುಲೈ 2021, 3:31 IST
ಆಕರ್ಷಕವಾಗಿ ರೂಪುಗೊಂಡಿರುವ ಕಬಕ-ಪುತ್ತೂರು ರೈಲ್ವೆ ನಿಲ್ದಾಣ
ಆಕರ್ಷಕವಾಗಿ ರೂಪುಗೊಂಡಿರುವ ಕಬಕ-ಪುತ್ತೂರು ರೈಲ್ವೆ ನಿಲ್ದಾಣ   

ಪುತ್ತೂರು: ಆದರ್ಶ ರೈಲು ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಮಳೆನೀರು ಇಂಗಿಸುವ ಕಾರ್ಯ, ಸ್ವಚ್ಛತೆ ಹಾಗೂ ಸೌಂದರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಲ್ಲಿನ ಸಿಬ್ಬಂದಿ ಇದಕ್ಕಾಗಿ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ.

ದರ್ಶ ರೈಲು ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿರುವ ಬಳಿಕ ಈ ರೈಲ್ವೆ ನಿಲ್ದಾಣ ಎಲ್ಲರನ್ನೂ ಆಕರ್ಷಿಸುತ್ತಿದೆ. ನಿಲ್ದಾಣದಲ್ಲಿ ಸಿಬ್ಬಂದಿ ಸಹಕಾರದಿಂದ ₹ 20 ಸಾವಿರ ವೆಚ್ಚ ಮಾಡಿ ಮುಂಭಾಗದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಫ್ಲಾಟ್ ಫಾರಂನಲ್ಲಿ ರೈಲ್ವೆ ಕಚೇರಿ ಗೋಡೆಗಳ ಬಳಿ ಹೂ ಕುಂಡಗಳನ್ನು ಇರಿಸಲಾಗಿದೆ. ನಿಲ್ದಾಣವು ಸ್ವಚ್ಛತೆಗೆ ಮಾದರಿಯಾದಂತೆ ಸೌಂದರ್ಯಕ್ಕೂ ಮಾದರಿಯಾಗಿದೆ.

ವಿಸ್ಟಾ ಡೋಮ್ ಬೋಗಿಯೊಂದಿಗೆ ಯಶವಂತಪುರ-ಮಂಗಳೂರು ರೈಲು ಸಂಚಾರ ಭಾನುವಾರ ಮಂಗಳೂರು ರೈಲ್ವೆ ಜಂಕ್ಷನ್ ನಿಲ್ದಾಣದಲ್ಲಿ ಉದ್ಘಾಟನೆಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣಕ್ಕೆ ತಲುಪುವ ರೈಲು ಬಂಡಿಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಸ್ವಾಗತಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲ್ ಅನ್ನು ನೋಡಲು ಪುತ್ತೂರಿನ ಜನರು ಕಾತರರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.