ADVERTISEMENT

ದಕ್ಷಿಣ ಕನ್ನಡ | ಕನೆಹಲಗೆ: ರೈ ಕೋಣಗಳು ಪ್ರಥಮ

11ನೇ ವರ್ಷದ ಮೂಡೂರು-–ಪಡೂರು ‘ಬಂಟ್ವಾಳ ಕಂಬಳ’ ಸಂಪನ್ನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 6:20 IST
Last Updated 19 ಏಪ್ರಿಲ್ 2022, 6:20 IST
ಮೂಡೂರು-– ಪಡೂರು ಜೋಡುಕರೆ ಕಂಬಳದಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬೆಳ್ಳಿಪಾಡಿ ರಮಾನಾಥ ರೈ ಅವರ ಕೋಣಗಳು ಕನೆ ಹಲಗೆ ವಿಭಾಗದಲ್ಲಿ ಪ್ರಥಮ ಪಡೆದು, ಗೆದ್ದು ಸಂತಸಪಟ್ಟರು. ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಇದ್ದರು.
ಮೂಡೂರು-– ಪಡೂರು ಜೋಡುಕರೆ ಕಂಬಳದಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬೆಳ್ಳಿಪಾಡಿ ರಮಾನಾಥ ರೈ ಅವರ ಕೋಣಗಳು ಕನೆ ಹಲಗೆ ವಿಭಾಗದಲ್ಲಿ ಪ್ರಥಮ ಪಡೆದು, ಗೆದ್ದು ಸಂತಸಪಟ್ಟರು. ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಇದ್ದರು.   

ಬಂಟ್ವಾಳ: ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆದ 11ನೇ ವರ್ಷದ ‘ಮೂಡೂರು-ಪಡೂರು’ ಜೋಡುಕರೆಯ ‘ಬಂಟ್ವಾಳ ಕಂಬಳ’ ಸೋಮವಾರ ಸಮಾರೋಪ ಗೊಂಡಿತು. ಒಟ್ಟು 162 ಜತೆ ಕೋಣಗಳು ಭಾಗವಹಿಸಿದ್ದವು.

ಫಲಿತಾಂಶ– ಕನೆಹಲಗೆ ವಿಭಾಗ: (ನೀರು ನೋಡಿ ಬಹುಮಾನ) ಪ್ರಥಮ– ಬೆಳ್ಳಿಪ್ಪಾಡಿ ರಮಾನಾಥ ರೈ (ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ), ದ್ವಿತೀಯ– ಬಾರ್ಕೂರು ಶಾಂತಾರಾಮ ಶೆಟ್ಟಿ (ಹಲಗೆ ಮುಟ್ಟಿದವರು– ಮಂದಾರ್ತಿ ಶಿರೂರು ಗೋಪಾಲ ನಾಯ್ಕ್)

ಅಡ್ಡ ಹಲಗೆ: ಪ್ರಥಮ, ದ್ವಿತೀಯ– ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೊ ‘ಎ’, ‘ಬಿ’ (ಹಲಗೆ ಮುಟ್ಟಿದ ವರು– ಸಾವ್ಯ ಗಂಗಯ್ಯ ಪೂಜಾರಿ).

ADVERTISEMENT

ಹಗ್ಗ ಹಿರಿಯ: ಪ್ರಥಮ ಮತ್ತು ದ್ವಿತೀಯ: ಮಿಜಾರ್ ಪ್ರಸಾದ್ ನಿಲಯ ಪ್ರಖ್ಯಾತ್ ಶೆಟ್ಟಿ ‘ಎ’, ‘ಬಿ’ (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.

ಹಗ್ಗ ಕಿರಿಯ: ಪ್ರಥಮ– ನಂದಳಿಕೆ ಕಂಪೊಟ್ಟು ವಿಕ್ಟರ್ ನೊರೊನ್ಹ (ಓಡಿಸಿ ದವರು– ಭಟ್ಕಳ ಶಂಕರ್), ದ್ವಿತೀಯ– ವಿಷ್ಣುಮೂರ್ತಿ ದೇವತಾ ಬಿಳಿಯೂರು ಮೇಗಿನಮನೆ ಶ್ರೀಶಾಂತ್ ಗಣಪ ಭಂಡಾರಿ (ಓಡಿಸಿದವರು– ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್).

ನೇಗಿಲು ಹಿರಿಯ: ಪ್ರಥಮ– ಬೀಯಪಾದೆ ಕೆರೆಕೋಡಿಗುತ್ತು ಶೇಖರ ಪೂಜಾರಿ ‘ಎ’ (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ– ಬೋಳದ ಗುತ್ತು ಸತೀಶ್ ಶೆಟ್ಟಿ ‘ಬಿ’ (ಓಡಿಸಿದವರು: ಮರೋಡಿ ಶ್ರೀಧರ್)

ನೇಗಿಲು ಕಿರಿಯ: ಪ್ರಥಮ– ಕಟೀಲ್ ಕೊಡೆತ್ತೂರು ಕಿನ್ನೆಚ್ಚಿಲ್ ಪ್ರಸಾದ್ ಶೆಟ್ಟಿ ‘ಎ’ (ಓಡಿಸಿದವರು– ಪಟ್ಟೆ ಗುರುಚರಣ್), ದ್ವಿತೀಯ– ಕಜೆಕಾರ್ ಕೊಲೆಂಜಿಲೋಡಿ ಶ್ರೀನಿಧಿ ವಾರಿಜ ಸುಂದರ ಪೂಜಾರಿ (ಓಡಿಸಿದವರು– ಒಂಟಿಕಟ್ಟೆ ರಿತೇಶ್)

ನೇಗಿಲು ಸಬ್ ಜೂನಿಯರ್: ಪ್ರಥಮ– ಪಣೋಳಿಬೈಲು ಭಂಡಾರದ ಮನೆ ರಮೇಶ್ ಕುಲಾಲ್ ‘ಎ’ (ಓಡಿಸಿದವರು– ಪಟ್ಟೆ ಗುರುಚರಣ್. ದ್ವ್ವಿತೀಯ– ಕಕ್ಕೆಪದವು ಪೆಂರ್ಗಾಲು ಶಿವಮ್ಮ ವೆಂಕಪ್ಪ ಗೌಡ (ಓಡಿಸಿದವರು– ಕಕ್ಕೆಪದವು ಪೆಂರ್ಗಾಲು ಕೃತಿಕ್).

ಬಹುಮಾನ ವಿತರಣೆ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಸಂಚಾಲಕ ಬಿ.ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಅವಿಲ್ ಮಿನೇಜಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಕೆ. ಮಾಯಿಲಪ್ಪ ಸಾಲ್ಯಾನ್, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ನಾವೂರ ಪಂಚಾಯಿತಿ ಅಧ್ಯಕ್ಷ ಉಮೇಶ ಕುಲಾಲ್, ರಾಜೇಶ್ ರಾಡ್ರಿಗಸ್, ಶಬೀರ್ ಸಿದ್ಧಕಟ್ಟೆ, ಡೆನ್ಜಿಲ್ ನೊರೋನ್ಹ ಇದ್ದರು.

ಅಡ್ಡಿ, ಆತಂಕಗಳ ನಡುವೆ ಯಶಸ್ವಿ: ರೈ
ಬಂಟ್ವಾಳ:
‘ತಾಲ್ಲೂಕಿನ ನಾವೂರು ಕೂಡಿಬೈಲು ಗದ್ದೆಯಲ್ಲಿ ಕಡಿಮೆ ಅವಧಿಯಲ್ಲಿ ಸುಸಜ್ಜಿತ ಹೊಸ ಜೋಡುಕರೆ ಸಿದ್ಧಪಡಿಸಲಾಗಿತ್ತು. ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆದ ‘ಬಂಟ್ವಾಳ ಕಂಬಳ’ ಹಲವು ಅಡ್ಡಿ ಆತಂಕಗಳ ನಡುವೆಯೂ ವರುಣನ ಕೃಪೆಯಿಂದ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕಂಬಳ ಕರೆಗೆ ನೇತ್ರಾವತಿ ನದಿಯಿಂದ ಮರಳು ತಂದು ಹಾಕುವುದಕ್ಕೂ ರಾಜಕೀಯ ವಿರೋಧಿಗಳು ಅಡ್ಡಿಪಡಿಸಿದ್ದಾರೆ. ಪೊಲೀಸರು ಮತ್ತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಕಂಬಳಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಆದರೆ, ನಮ್ಮ ಕಂಬಳ ಮತ್ತು ನಿಮ್ಮ ಕಂಬಳಕ್ಕೆ ಅಂತಿಮವಾಗಿ ಯಶಸ್ಸು ಸಿಕ್ಕಿದೆ’ ಎಂದು ತಿಳಿಸಿದರು.

‘ಸ್ಥಳೀಯ ಕಂಬಳಾಸಕ್ತರು ಮತ್ತು ಕೃಷಿಕರು ಜಾತಿ, ಧರ್ಮಗಳನ್ನು ಮೀರಿ ಸೌಹಾರ್ದಯುತವಾಗಿ ಸ್ಪಂದಿಸಿದ್ದಾರೆ. ದೇವರಿಗೂ ನಮ್ಮ ಪ್ರಾಮಾಣಿಕ ಪ್ರಾರ್ಥನೆ ಕೇಳಿಸಿದಂತೆ ವರುಣ ದೇವರ ಕೃಪೆಯೂ ಸಿಕ್ಕಿದೆ. ಈ ಕಂಬಳದಲ್ಲಿ ನನ್ನ ಹೆಸರಿನಲ್ಲಿ ಕೋಣಗಳನ್ನು ಓಡಿಸಿ ಸಂಭ್ರಮಿಸುವುದು ತಪ್ಪು. ಆದರೆ, ನನ್ನ ಸ್ನೇಹಿತರ ಒತ್ತಾಯಕ್ಕೆ ಮಣಿದು ಒಪ್ಪಿಗೆ ನೀಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.