ADVERTISEMENT

ಸುಬ್ರಹ್ಮಣ್ಯ | ‘ಯೋಧರನ್ನು ಗೌರವಿಸುವುದು ಶ್ರೇಷ್ಠ ಕಾರ್ಯ’

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 13:44 IST
Last Updated 27 ಜುಲೈ 2024, 13:44 IST
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಯೋಧರನ್ನು ಸನ್ಮಾನಿಸಲಾಯಿತು
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಯೋಧರನ್ನು ಸನ್ಮಾನಿಸಲಾಯಿತು   

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಟರಿ ಕ್ಲಬ್, ರೈತ ಯುವಕ ಮಂಡಲ ಏನೆಕಲ್, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ರೀಜನ್‌, ಇನ್ನರ್‌ವೀಲ್‌ ಕ್ಲಬ್ ಆಶಯದಲ್ಲಿ ಏನೇಕಲ್ಲಿನ ರೈತ ಯುವಕ ಮಂಡಲದಲ್ಲಿ ಕಾರ್ಗಿಲ್‌ ವಿಜಯ ದಿನಾಚರಣೆ, ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು.

ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ರೀಜನ್ ಅಧ್ಯಕ್ಷ ರವಿ ಕಕ್ಕೆಪದವು, ಪ್ರಮುಖರಾದ ಶೃತಿ ಮಂಜುನಾಥ್, ವಿಶ್ವನಾಥ ನಡುತೋಟ, ರಾಮಕೃಷ್ಣ ಮಲ್ಲಾರ, ಮೋಹನ ಗೌಡ ಕೋಟಿ ಗೌಡನ ಮನೆ, ಪ್ರಶಾಂತ ಕೊಡಿಬೈಲು, ಭರತ್‌ ನೆಕ್ರಾಜೆ, ಚಿದಾನಂದ ಕುಳ ಭಾಗವಹಿಸಿದ್ದರು.

ADVERTISEMENT

ಸೈನಿಕರಾದ ನಾರಾಯಣ ಭಟ್, ಸುಬೇದಾರ್ ವಾಸುದೇವ ಗೌಡ ಬಾನಡ್ಕ, ಸುಬೇದಾರ್ ಗೋಪಾಲ್ ಗೌಡ, ಸುಬೇದಾರ್ ಹೊನ್ನಪ್ಪ ಗೌಡ ಏನೆಕಲ್, ಕೆ.ಎಂ.ಜಯರಾಮಗೌಡ, ಭವಾನಿ ಶಂಕರ ಪೂಂಬಾಡಿ, ಸುಬ್ರಹ್ಮಣ್ಯ ಆತ್ಯಾಡಿ ಅವರನ್ನು ಗೌರವಿಸಲಾಯಿತು.

ಶಿವರಾಮ ಏನೇಕಲ್ ಸ್ವಾಗತಿಸಿದರು. ಚಿದಾನಂದ ಕುಳ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.