ಪುತ್ತೂರು: ದೇಶದೊಳಗೆ ಇರುವ ಸಮಾಜ ಘಾತಕರು ಹೆಚ್ಚು ಅಪಾಯಕಾರಿಗಳಾಗಿದ್ದು, ಅಂಥವರ ಬಗ್ಗೆ ಗಮನಹರಿಸಬೇಕು ಎಂದು ನಿವೃತ್ತ ಯೋಧ ಲೋಕೇಶ್ ಹೇಳಿದರು.
ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಹನುಮಗಿರಿಯ ಅಮರಗಿರಿಯಲ್ಲಿ ಶುಕ್ರವಾರ ನಡೆದ ಕಾರ್ಗಿಲ್ ವಿಜಯೋತ್ಸವ ಮತ್ತು ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು.
ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಅವರು ಅಧ್ಯಕ್ಷತೆ ವಹಿಸಿದ್ದರು.
ಕೃಷಿಕ ಮುಂಡ್ಯ ಶ್ರೀಕೃಷ್ಣ ಭಟ್, ಗೌರವಾರ್ಪಣೆ ಸ್ವೀಕರಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಪದ್ಮನಾಭ ಮಾತನಾಡಿದರು. ಶಿಕ್ಷಕಿ ಸೌಮ್ಯಾ ಸನ್ಮಾನಿತರ ಪರಿಚಯ ಮಾಡಿದರು.
ಗಜಾನನ ವಿದ್ಯಾಸಂಸ್ಥೆ ಸಂಚಾಲಕ ಶಿವರಾಂ ಪಿ.ಈಶ್ವರಮಂಗಲ ಸ್ವಾಗತಿಸಿದರು. ನಿರ್ದೇಶಕ ಶಿವರಾಮ ಶರ್ಮ ಕತ್ರಿಬೈಲು ವಂದಿಸಿದರು. ಶಿಕ್ಷಕಿಯರಾದ ಅನುಷಾ, ಸೌಮ್ಯಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.