
ಬಂಟ್ವಾಳ: ಜನರಿಗೆ ಸುಲಭವಾಗಿ ಸಿಗುವ ಗ್ರಾಮ ಪಂಚಾಯಿತಿ ಜನತೆಗೆ ತ್ವರಿತವಾಗಿ ಸ್ಪಂದಿಸಿದಾಗ ಅವರು ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಕರಿಯಂಗಳ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಚುನಾಯಿತ ಸದಸ್ಯರ ಗೌರವ ಸಮರ್ಪಣೆ ಮತ್ತು ಐದು ವರ್ಷಗಳ ಆಡಳಿತಾವಧಿಯ ಸಾಧನೆಗಳನ್ನು ಬಿಂಬಿಸುವ ‘ಪಂಚಯಾನ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸ್ಥಳೀಯ ಬಾಬಾ ಫಕ್ರುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಸಹಿತ ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್, ಲೇಖಕ ಚಂದ್ರಶೇಖರ್ ಪಾತೂರು, ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ರಾಧಾ ಲೋಕೇಶ್, ಪಿಡಿಒ ಮಾಲಿನಿ, ವಸಂತಿ ಜಯಪ್ರಕಾಶ್, ಪ್ರಮುಖರಾದ ಭಾರತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.