ADVERTISEMENT

SSLC Exam Tips | ಹಿಂದಿ: ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು

ಪ್ರಜಾವಾಣಿ ವಿಶೇಷ
Published 15 ಮಾರ್ಚ್ 2024, 14:03 IST
Last Updated 15 ಮಾರ್ಚ್ 2024, 14:03 IST

ತೃತೀಯ ಭಾಷೆ ಹಿಂದಿಯಲ್ಲಿ ಈ ಬಾರಿ ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು ಇರುತ್ತವೆ. ಪಠ್ಯಪುಸ್ತಕದಲ್ಲಿರುವ ಎಲ್ಲ ಪಾಠಗಳು ಪರೀಕ್ಷೆಗೆ ಅನ್ವಯವಾಗುತ್ತವೆ. ಕನಿಷ್ಠ ಎರಡು ಬಾರಿಯಾದರೂ ಇಡೀ ಪುಸ್ತಕ ಅಭ್ಯಾಸ ಮಾಡಬೇಕು. ಪಾಠದ ಒಳಗಿನಿಂದಲೂ ಪ್ರಶ್ನೆ ಬರಬಹುದು. ಬಹು ಆಯ್ಕೆಯ 8 ಪ್ರಶ್ನೆಗಳು ವ್ಯಾಕರಣಕ್ಕೆ ಸಂಬಂಧಿಸಿ ಇರುವುದರಿಂದ ವ್ಯಾಕರಣದ ಒಂಬತ್ತು ಅಂಶ ಗಮನದಲ್ಲಿಡುವುದು ಉತ್ತಮ. ಅನುವಾದವನ್ನು ಸರಿಯಾಗಿ ಮಾಡಿದಲ್ಲಿ ಪೂರ್ಣ ಮೂರು ಅಂಕ ಗಳಿಸಬಹುದು. ಪತ್ರ ಲೇಖನದಲ್ಲಿ ರಜೆ ಅರ್ಜಿ ಅಥವಾ ತಂದೆಗೆ ಪತ್ರ ಸರಿಯಾಗಿ ಕಲಿತರೆ ಪೂರ್ಣ ಐದು ಅಂಕ ಪಡೆಯಬಹುದು. ಪಾಠಕ್ಕೆ ಸಂಬಂಧಿಸಿದ ವಿಷಯ ಮೇಲೆಯೇ ಹೆಚ್ಚಾಗಿ ಒಂದು ನಿಬಂಧ ಬರುತ್ತದೆ-ಮಹೇಶ್‌. ಎಂ ಎಸ್‌, ಹಿಂದಿ ಶಿಕ್ಷಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.