ADVERTISEMENT

ತಿಂಗಳಲ್ಲಿ ಕರ್ನಾಟಕ ಕೊರೊನಾ ಮುಕ್ತ: ಸಚಿವ ನಾರಾಯಣ ಗೌಡ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 14:18 IST
Last Updated 26 ಆಗಸ್ಟ್ 2020, 14:18 IST
ಕೆ.ಸಿ.ನಾರಾಯಣಗೌಡ (ಸಂಗ್ರಹ ಚಿತ್ರ)
ಕೆ.ಸಿ.ನಾರಾಯಣಗೌಡ (ಸಂಗ್ರಹ ಚಿತ್ರ)   

ಪುತ್ತೂರು: ಮುಂದಿನ ಒಂದು ತಿಂಗಳ ಒಳಗಾಗಿ ಕರ್ನಾಟಕವು ಸಂಪೂರ್ಣ ಕೊರೊನಾ ಮುಕ್ತ ರಾಜ್ಯವಾಗಲಿದೆ ಎಂದು ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಭವಿಷ್ಯ ನುಡಿದರು.

ಪುತ್ತೂರು ನಗರಸಭೆಯ ನೂತನ ಕಟ್ಟಡಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೆ, ಕೊರೊನಾ ಸೋಂಕು ತಡೆಯಲು ಸಾಧ್ಯವಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಯತ್ನದಿಂದಾಗಿ ರಾಜ್ಯವು ಕೊರೊನಾ ನಿಯಂತ್ರಣದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ’ ಎಂದ ಅವರು, ‘ಬಿಜೆಪಿ ಬಂದ ಬಳಿಕ ನನಗೆ ಬಲ ಬಂದಿದೆ’ ಎಂದರು.

ADVERTISEMENT

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿ ನೇಮಕಾತಿಯನ್ನು ಶೀಘ್ರವೇ ಮಾಡಲಾಗುವುದು. ರೈತರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯು ₹400 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.