
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಕಾಸರಗೋಡು: ಕುಂಬಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯೊಂದರಲ್ಲಿ ಪುಷ್ಪಲತಾ ವಿ.ಶೆಟ್ಟಿ (72) ಎಂಬುವರ ಶವ ಶಂಕಾಸ್ಪದವಾಗಿ ಗುರುವಾರ ಪತ್ತೆಯಾಗಿದೆ.
ಮುಖದಲ್ಲಿ ಗಾಯಗಳು ಕಂಡುಬಂದಿವೆ. ಅವರು ದಿ.ವೆಂಕಪ್ಪ ಶೆಟ್ಟಿ ಎಂಬುವರ ಪತ್ನಿ. ಮನೆಯಲ್ಲಿ ಒಬ್ಬರೇ ಇದ್ದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿ ಎಂದು ತನಿಖೆ ನಡೆಸುತ್ತಿರುವ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ. ಶ್ವಾನದಳ ತಪಾಸಣೆ ನಡೆಸಿದೆ. ಮನೆಯ ಹಿಂಬಾಗಿಲು ತೆರೆದುಕೊಂಡಿತ್ತು. ಪುಷ್ಪಲತಾ ಅವರ ಕೊರಳಲ್ಲಿದ್ದ ಕರಿಮಣಿ ನಾಪತ್ತೆಯಾಗಿದ್ದು, ಕಪಾಟಿನಲ್ಲಿಸಿದ್ದ ಚಿನ್ನಾಭರಣಗಳು ಹಾಗೆಯೇ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.