ADVERTISEMENT

ಕೇರಳ ಯಾತ್ರೆಗೆ ಜ.1ರಂದು ಉಳ್ಳಾಲದಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:33 IST
Last Updated 30 ಡಿಸೆಂಬರ್ 2025, 8:33 IST
ಉಳ್ಳಾಲದಲ್ಲಿ ಸುದ್ದಿಗೋಷ್ಠಿ
ಉಳ್ಳಾಲದಲ್ಲಿ ಸುದ್ದಿಗೋಷ್ಠಿ   

ಉಳ್ಳಾಲ: ‘ಮನುಷ್ಯರೊಂದಿಗೆ’ ಎಂಬ ಧ್ಯೇಯವಾಕ್ಯದಡಿ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆಯೋಜಿಸಿರುವ ಕೇರಳ ಯಾತ್ರೆ ಜ.1ರಂದು ಉಳ್ಳಾಲ ದರ್ಗಾ ಝಿಯಾರತ್‌ನೊಂದಿಗೆ ಆರಂಭವಾಗಲಿದೆ ಎಂದು ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿ ತಿಳಿಸಿದರು.

ಇಂಡಿಯನ್ ಗ್ರಾಂಡ್ ಮುಫ್ತಿ, ಉಳ್ಳಾಲ ದರ್ಗಾ ಸಂಯುಕ್ತ ಜಮಾತ್ ಖಾಝಿ ಕಾಂತಪುರ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ. ಯಾತ್ರೆಗೆ ಕೇರಳದ 17 ಕೇಂದ್ರಗಳಲ್ಲಿ ಸ್ವಾಗತ ಸಮಾರಂಭಗಳು ನಡೆಯಲಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಂ ರೆಹ್ಮಾನ್, ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.