ADVERTISEMENT

ದೇವದಾರಿನಲ್ಲಿ ಗಣಿಗಾರಿಕೆ: ಕೆಐಒಸಿಎಲ್‌ ಸಿಎಂಡಿ ಸುಬ್ಬರಾವ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 5:50 IST
Last Updated 29 ಜೂನ್ 2021, 5:50 IST
ಸುಬ್ಬರಾವ್‌
ಸುಬ್ಬರಾವ್‌   

ಮಂಗಳೂರು: ಬಳ್ಳಾರಿ ಜಿಲ್ಲೆಯ ದೇವದಾರಿನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಕೆಐಒಸಿಎಲ್‌ಗೆ ಅನುಮತಿ ದೊರಕಿದೆ. ಈ ಆರ್ಥಿಕ ವರ್ಷದಲ್ಲಿ ಗಣಿಗಾರಿಕೆ ಆರಂಭವಾಗಲಿದೆ ಎಂದು ಕೆಐಒಸಿಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಬರಾವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘₹ 1,500 ಕೋಟಿಗಳ ಐದು ವರ್ಷಗಳ ಯೋಜನೆ ಇದಾಗಿದ್ದು, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು 401 ಹೆಕ್ಟೇರ್ ಪ್ರದೇಶದಲ್ಲಿ ಗಣಿ ಗಾರಿಕೆ ನಡೆಸಲು ಪ್ರಥಮ ಹಂತದ ಅನುಮತಿ ನೀಡಿದೆ’ ಎಂದರು.

5 ವರ್ಷಗಳ ಯೋಜನೆ ಯಡಿ ಸುಮಾರು ಒಂದು ಸಾವಿರ ಮಂದಿಗೆ ಉದ್ಯೋಗ ದೊರ ಕಲಿದೆ. ಕೆಐಒಸಿಎಲ್‌ನಿಂದ 15 ವರ್ಷ ಗಳ ಬಳಿಕ ರಾಜ್ಯದಲ್ಲಿ ಮತ್ತೆ ಗಣಿಗಾರಿಕೆ ಆರಂಭ ಆಗಲಿದೆ ಎಂದು ಹೇಳಿದರು.

ADVERTISEMENT

4 ವರ್ಷಗಳಲ್ಲಿ ಉತ್ತಮ ಸಾಧನೆ ತೋರಿದ್ದು, ಕೋವಿಡ್‌ ಸಂಕಷ್ಟದ ನಡುವೆಯೂ ಕಂಪನಿಯು ಈ ಬಾರಿ
₹ 2,477.83 ಕೋಟಿ ಆದಾಯ ಗಳಿಸಿದೆ. ತೆರಿಗೆ ಬಳಿಕ ₹ 301.17 ಕೋಟಿ ಲಾಭ ಗಳಿಸಿದೆ ಎಂದರು.

ಸಂಸ್ಥೆಯ ಸಿಬ್ಬಂದಿ, ಹೊರ ಗುತ್ತಿಗೆ ಸಿಬ್ಬಂದಿ, ವಲಸೆ ಕಾರ್ಮಿಕರು ಹಾಗೂ ಅವರ ಕುಟುಂಬದವರು ಸೇರಿ ಶೇ 99ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಸಿಆರ್‌ಎಸ್ ನಿಧಿಯಿಂದ ವೆನ್ಲಾಕ್ ಆಸ್ಪತ್ರೆಗೆ ಆಂಬುಲೆನ್ಸ್ ನೀಡಿದೆ ಎಂದರು.

ಕೆಐಒಸಿಎಲ್‌ನ (ಉತ್ಪಾದನೆ) ನಿರ್ದೇಶಕ ಭಾಸ್ಕರ್ ರೆಡ್ಡಿ, ಪಿಆರ್‌ಒ ಮುರುಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.