ADVERTISEMENT

ಮಂಗಳೂರು | ರಾಮಾಯಣ ಪುಸ್ತಕ ಅಭಿಯಾನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 7:15 IST
Last Updated 30 ಡಿಸೆಂಬರ್ 2023, 7:15 IST

ಮಂಗಳೂರು: ರಾಜ್ಯ ಮತ್ತು ರಾಷ್ಟ್ರದ ಓದುಗರನ್ನು ತಲುಪುವ ಉದ್ದೇಶದಿಂದ ಕುಂಟಿಕಾನಮಠ ಬಾಲಕೃಷ್ಣ ಭಟ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೋಟಿ ರಾಮಾಯಣ ಮತ್ತು ಮಹಾಭಾರತ ಪುಸ್ತಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಕೋಶಾಧಿಕಾರಿ ಗೋವಿಂದ ಭಟ್ ಹೇಳಿದರು.

ದಿವಂಗತ ಕುಂಟಿಕಾನ ಮಠ ಬಾಲಕೃಷ್ಣ ಭಟ್ ರಚಿಸಿದ 800 ಪುಟಗಳ ‘ಶ್ರೀ ರಾಮಕಥಾಮಂಜರಿ’ (ಸಂಪೂರ್ಣ ರಾಮಾಯಣ), 800 ಪುಟಗಳ ‘ಶ್ರೀಕೃಷ್ಣ ಕಥಾಮಂಜರಿ’ (ಸಂಪೂರ್ಣ ಮಹಾಭಾರತ) ಕನ್ನಡ ಗದ್ಯ ಕಾವ್ಯಗಳ ಅಭಿಯಾನವನ್ನು ಐದು ವರ್ಷಗಳಿಂದ  ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ರಾಮಾಯಣ, ಮಹಾಭಾರತ ಕುರಿತ ರಸಪ್ರಶ್ನೆ, ಪರೀಕ್ಷೆ ನಡೆಸಲಾಗಿದೆ ಎಂದರು.

ನಟ ಸುಜಯ್ ಹುಣಸೂರು, ಸಲಹೆಗಾರ ಕುಮಾರ್ ಕುಂಟಿಕಾನ ಮಠ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.