ಕೊಯಿಲ (ಉಪ್ಪಿನಂಗಡಿ): ಅನಾರೋಗ್ಯದಿಂದಾಗಿ ದುಡಿಯಲಾಗದ ಸ್ಥಿತಿಯಲ್ಲಿದ್ದ ಕೊಯಿಲ ಗ್ರಾಮದ ಸನ್ಯಾಸಿಮೂಲೆ ನಿವಾಸಿ ಶಿಹಾಬುದ್ದೀನ್ ಎಂಬುವರಿಗೆ ಕೊಂತೂರು ಚರ್ಚ್ ಟ್ರಸ್ಟ್ ವತಿಯಿಂದ ಪೆಟ್ಟಿ ಅಂಗಡಿ ನೀಡಿ ವ್ಯಾಪಾರಕ್ಕೆ ನೆರವಾಗಿದ್ದಾರೆ.
ಶಿಹಾಬುದ್ದೀನ್ ಅವರು ಕೆಲ ಸಮಯದಿಂದ ಅನಾರೋಗ್ಯಕ್ಕೀಡಾಗಿ ಕೂಲಿ ಮಾಡಲಾರದ ಸ್ಥಿತಿಯಲ್ಲಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳಿರುವ ಕುಟುಂಬ ನಿರ್ವಹಣೆಗೆ ಕಷ್ಟವಾಗಿತ್ತು. ಇದನ್ನು ಮನಗಂಡ ಸ್ಥಳೀಯ ನಿವಾಸಿ ಅಬ್ರಾಹಾಂ ಕೆ.ಜಿ. ಅವರು ಕೊಂತೂರು ಸೇಂಟ್ ಮೇರಿಸ್ ಜಾಕೋಬೈಟ್ ಸಿರಿಯನ್ ಚರ್ಚ್ ಧರ್ಮಗುರು ಪಿ.ಕೆ.ಅಬ್ರಾಹಾಂ ಟ್ಟಸ್ಟ್ ಗಮನಕ್ಕೆ ತಂದಿದ್ದು, ಅವರ ನೇತೃತ್ವದಲ್ಲಿರುವ ‘ಮೈ ಬೆಸ್ಟ್ ಫ್ರೆಂಡ್ಸ್’ ಚಾರಿಟಿ ಟ್ರಸ್ಟ್ ಮೂಲಕ ನೆರವಾಗಿದ್ದಾರೆ.
ಕೊಂತೂರು ಚರ್ಚ್ ಧರ್ಮಗುರು ಪಿ.ಕೆ.ಅಬ್ರಹಾಂ ಅವರು ಅಂಗಡಿಯನ್ನು ಹಸ್ತಾಂತರಿಸಿದರು. ಟ್ರಸ್ಟ್ ಸದಸ್ಯ ಪ್ರಶಾಂತ್ ನೆಲ್ಯಾಡಿ, ಸುಜನ್ ರೆಂಜಲಾಡಿ, ಚರ್ಚ್ ಲೆಕ್ಕಪರಿಶೋಧಕ ಅಬ್ರಾಹಂ ಕೆ.ಜಿ., ಗಂಡಿಬಾಗಿಲು ಮಸೀದಿ ಖತೀಬ್ ಅಬ್ದುಲ್ ರಜಾಕ್ ಸುಲ್ತಾನ್ ದಾರಿಮಿ, ಯಂಗ್‌ಮೆನ್ಸ್ ಅಧ್ಯಕ್ಷ ನಿಸಾರ್ ಗಂಡಿಬಾಗಿಲು, ಕಾರ್ಯದರ್ಶಿ ಜಿ.ಅಬ್ದುಲ್ ರಜಾಕ್, ಮಾಜಿ ಅಧ್ಯಕ್ಷ ಪಿ.ಲತೀಫ್, ಪದಾಧಿಕಾರಿಗಳಾದ ಯಾಕೂಬ್, ಮಹಮ್ಮದ್ ಆಲಿ, ಉಬೈದುಲ್ಲ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.