ADVERTISEMENT

ಗುರುವಾಯನಕೆರೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 4:09 IST
Last Updated 18 ಆಗಸ್ಟ್ 2025, 4:09 IST
ಗುರುವಾಯನಕೆರೆ ವೇದವ್ಯಾಸ ಶಿಶುಮಂದಿರದ ವತಿಯಿಂದ ಹವ್ಯಕ ಭವನದಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು
ಗುರುವಾಯನಕೆರೆ ವೇದವ್ಯಾಸ ಶಿಶುಮಂದಿರದ ವತಿಯಿಂದ ಹವ್ಯಕ ಭವನದಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು   

ಬೆಳ್ತಂಗಡಿ: ‘ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಿದರೆ ಭವಿಷ್ಯತ್ತಿನಲ್ಲಿ ಉತ್ತಮ ಫಲ ನೀಡುತ್ತದೆ’ ಎಂದು ಬ್ಯಾಂಕ್ ಆಫ್ ಬರೋಡ ನೂಜಿಬಾಳ್ತಿಲ ಶಾಖೆಯ ಪ್ರಬಂಧಕ ಶಿವಪ್ರಸಾದ್ ಸುರ್ಯ ಹೇಳಿದರು.

ಗುರುವಾಯನಕೆರೆ ಶ್ರೀವೇದವ್ಯಾಸ ಶಿಶುಮಂದಿರದ ವತಿಯಿಂದ ಹವ್ಯಕ ಭವನದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ವೇದವ್ಯಾಸ ಶಿಶುಮಂದಿರದ ಅಧ್ಯಕ್ಷೆ ಇಂದುಮತಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾತೃ ಮಂಡಳಿ ಅಧ್ಯಕ್ಷೆ ಮಮಿತಾ ಸುಧೀರ್ ಭಾಗವಹಿಸಿದ್ದರು.

ADVERTISEMENT

ಶಿಶುಮಂದಿರದ ಅಶ್ವಿನಿ ಮತ್ತು ರಮ್ಯಾ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ಆಡಳಿತ ಮಂಡಳಿಯ ಸದಸ್ಯೆ ರಚನಾ ಪಿ.ಸ್ವಾಗತಿಸಿ, ಕೋಶಾಧಿಕಾರಿ ಪ್ರಿಯದರ್ಶಿನಿ ವಂದಿಸಿದರು. ಉಪಾಧ್ಯಕ್ಷೆ ಸುಧಾಮಣಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.