ADVERTISEMENT

ಪುತ್ತೂರು: ಕುಸಿದು ಬಿದ್ದರೂ ಪ್ರಯಾಣಿಕರ ಪಾರು ಮಾಡಿದ ಕೆಎಸ್‌ಆರ್‌ಟಿಸಿ ಚಾಲಕ

ಬಸ್‌ ಚಲಿಸುತ್ತಿದ್ದಾಗ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:55 IST
Last Updated 8 ಜುಲೈ 2025, 6:55 IST
   

ಪುತ್ತೂರು: ಬಸ್‌ ಚಲಾಯಿಸುತ್ತಿದ್ದಾಗ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಅಸ್ವಸ್ಥಗೊಂಡು ಸ್ಟಿಯರಿಂಗ್ ಮೇಲೆ ಬಿದ್ದರೂ ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಪುತ್ತೂರಿನಿಂದ ಸುಳ್ಯಕ್ಕೆ ದಯಾನಂದ ಎಂಬುವರು ಬಸ್‌ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.

ಬಸ್ ಕಂಬ್ರಕ್ಕೆ ತಲುಪುತ್ತಿದ್ದಂತೆ ದಯಾನಂದ ಅವರು ಅಸ್ವಸ್ಥಗೊಂಡಿದ್ದರು. ಸ್ಥಳೀಯರು ಅವರನ್ನು ಸ್ಥಳೀಯ ಕ್ಲೀನಿಕ್ ಒಂದಕ್ಕೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಔಷಧಿ ನೀಡಿದ್ದರು. ಔಷಧಿ ಸೇವಿಸಿದ ಬಳಿಕ ಚೇತರಿಸಿಕೊಂಡ ಅವರನ್ನು ಮನೆಗೆ ಕಳುಹಿಸಿ ಕೊಡಲಾಯಿತು. ಪ್ರಯಾಣಿಕರನ್ನು ಬದಲಿ ಬಸ್‌ನಲ್ಲಿ ಕಳುಹಿಸ‌ಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.