ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಗಣೇಶೋತ್ಸವ ಆಮಂತ್ರಣ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:35 IST
Last Updated 22 ಆಗಸ್ಟ್ 2025, 5:35 IST
ಕಾಶಿಕಟ್ಟೆ ಮಹಾಗಣಪತಿ ಸನ್ನಿಧಿಯಲ್ಲಿ ಸಂಚಾಲಕ ಎ.ವೆಂಕಟ್‌ರಾಜ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು
ಕಾಶಿಕಟ್ಟೆ ಮಹಾಗಣಪತಿ ಸನ್ನಿಧಿಯಲ್ಲಿ ಸಂಚಾಲಕ ಎ.ವೆಂಕಟ್‌ರಾಜ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು   

ಸುಬ್ರಹ್ಮಣ್ಯ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ 55ನೇ ವರ್ಷದ ಆಮಂತ್ರಣ ಪತ್ರಿಕೆಯನ್ನು ಸಮಿತಿ ಸಂಚಾಲಕ ಎ.ವೆಂಕಟ್‌ರಾಜ್, ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು.

ಕಾಶಿಕಟ್ಟೆ ಮಹಾಗಣಪತಿಗೆ ಸಮಿತಿ ವತಿಯಿಂದ ರಂಗಪೂಜೆ ಸೇವೆ ಸಮರ್ಪಿಸಲಾಯಿತು. ಸಮಿತಿ ಅಧ್ಯಕ್ಷ ಕೆ.ಯಜ್ಞೇಶ್ ಆಚಾರ್ ಸಂಕಲ್ಪ ನೆರವೇರಿಸಿದರು. ಅರ್ಚಕ ಪ್ರಸಾದ್ ಕಲ್ಲೂರಾಯ ಪೂಜೆ ನೆರವೇರಿಸಿದರು.

ಸಂಚಾಲಕ ರಾಜೇಶ್ ಎನ್.ಎಸ್, ಕೃಷ್ಣಾಷ್ಟಮಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಮಾನಾಡು, ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ, ಪ್ರಧಾನ ಕಾರ್ಯದರ್ಶಿ ರತ್ನಾಕರ.ಎಸ್, ಕಾರ್ಯದರ್ಶಿ ದೀಪಕ್ ನಂಬಿಯಾರ್, ನಿಕಟಪೂರ್ವಾಧ್ಯಕ್ಷ ದಿನೇಶ್ ಮೊಗ್ರ, ಪೂರ್ವಾಧ್ಯಕ್ಷರಾದ ಉಮೇಶ್ ಕೆ.ಎನ್, ಲೋಕೇಶ್ ಬಿ.ಎನ್, ಲೋಕೇಶ್ ಎನ್.ಎಸ್, ಗಣೇಶ್ ಪ್ರಸಾದ್.ಎನ್, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ವೆಂಕಟೇಶ್ ಎಚ್.ಎಲ್, ಉಪಾಧ್ಯಕ್ಷರಾದ ಅಚ್ಯುತ ಗೌಡ, ಯಶೋಧಕೃಷ್ಣ ನೂಚಿಲ, ಪ್ರಮುಖರಾದ ಅಶೋಕ್ ಕುಮಾರ್ ಮೂಲೆಮಜಲು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.