ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ 30ನೇ ಮಾಸ್ಟರ್ ಪ್ಲ್ಯಾನ್ ಸಮಿತಿ ಸಭೆ ನಡೆಯಿತು.
ಸುಮಾರು ₹ 26 ಕೋಟಿ ವೆಚ್ಚದ ಸುತ್ತು ಪೌಳಿ ನಿರ್ಮಾಣದ ಕೆಲಸ, ರಥ ಬೀದಿಯ ಬಲಭಾಗದಲ್ಲಿ ಸುಮಾರು 5 ಸಾವಿರ ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳುವ ಭೋಜನ ಶಾಲೆ, ಅಂದಾಜು ₹ 80ರಿಂದ ₹ 100 ಕೋಟಿ ವೆಚ್ಚದಲ್ಲಿ ಇಂಜಾಡಿ ಬಳಿ ಯಾತ್ರಿಕರಿಗೆ 820 ಕೊಠಡಿಗಳ ವಸತಿ ಯೋಜನೆ, ರಥಬೀದಿಯ ಇಕ್ಕೆಲದಲ್ಲಿ ಪಾರಂಪರಿಕ ಕಟ್ಟಡ ನಿರ್ಮಾಣ, ಆಧುನಿಕ ಶೌಚಾಲಯ, ಛತ್ರ, ಈ ಹಿಂದಿನ ವಸತಿ ಗೃಹಗಳಿಗೆ ಕಾಯಕಲ್ಪ, ನೌಕರರಿಗೆ ನೂತನ ವಸತಿ ಗೃಹ, ಕಸ ವಿಲೇವಾರಿ ಘಟಕ, ವ್ಯಾಪಾರ ಮಳಿಗೆ, ಅರಂಪಾಡಿ-ಎಡೋಳಿ ಮೂಲಕ ಸುಬ್ರಹ್ಮಣ್ಯಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಕುರಿತು ಚರ್ಚೆ ನಡೆಯಿತು.
ಲೋಕೋಪಯೋಗಿ ಎಂಜಿನಿಯರ್ ಪ್ರಮೋದ್ ಕುಮಾರ್ ಕಟ್ಟಡಗಳ ನೀಲ ನಕ್ಷೆ ಕುರಿತು ವಿವರಿಸಿದರು.
ಮುಖಂಡ ರಮಾನಾಥ ರೈ, ಶಾಸಕಿ ಭಾಗೀರಥಿ ಮುರುಳ್ಯ, ಮುಜರಾಯಿ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ದ.ಕ ಜಿಲ್ಲಾ ಮುಜರಾಯಿ ಆಯುಕ್ತ ಗೋವಿಂದ ನಾಯ್ಕ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜು, ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಮಲ್ಲಿಕಾ ಪಕ್ಕಳ, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ., ವಲಯಾರಣ್ಯಾಧಿಕಾರಿ ವಿಮಲ್ ಬಾಬು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್‌ಪ್ಲ್ಯಾನ್ ಸಮಿತಿ ಸದಸ್ಯರು, ಲೋಕೋಪಯೋಗಿ, ಕೆಎಸ್ಆರ್‌ಟಿಸಿ, ಕಂದಾಯ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.