ADVERTISEMENT

ಕುಂಬಳೆ | ಟೋಲ್‌ಗೇಟ್‌ ನಿರ್ಮಾಣಕ್ಕೆ ಸಿದ್ಧತೆ: ಸ್ಥಳೀಯರ ಅಸಮಾಧಾನ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 6:00 IST
Last Updated 27 ಏಪ್ರಿಲ್ 2025, 6:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಕಾಸರಗೋಡು: ಕುಂಬಳೆಯ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗೇಟ್ ನಿರ್ಮಿಸುವ ಸಂಬಂಧ ಪ್ರಯತ್ನ ನಡೆಯುತ್ತಿದ್ದು, ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ.

ADVERTISEMENT

ಗಡಿ ಪ್ರದೇಶ ತಲಪಾಡಿಯಲ್ಲಿ ಈಗಾಗಲೇ ಟೋಲ್‌ಗೇಟ್‌ ಇದ್ದು, 20 ಕಿ.ಮೀ ಅಂತರದಲ್ಲಿ ಮತ್ತೊಂದು ಟೋಲ್‌ಗೇಟ್‌ ನಿರ್ಮಾಣವಾದರೆ ಪ್ರತಿದಿನ ಓಡಾಡುವ ಪ್ರಯಾಣಿಕರಿಗೆ ತೊಂದರೆ ಆಗಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿ.ಮೀ ಅಂತರದಲ್ಲಿ ಒಂದು ಟೋಲ್‌ಗೇಟ್ ಮಾತ್ರ ಇರಬಹುದು ಎಂಬ ನಿಯಮ ಇದೆ. ಜತೆಗೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಟೋಲ್‌ಗೇಟ್ ನಿರ್ಮಾಣಕ್ಕೆ ಮುಂದಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಭಾಗದ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಪೆರಿಯ ವಿಶ್ವವಿದ್ಯಾಲಯ ಬಳಿ ಟೋಲ್‌ಗೇಟ್ ನಿರ್ಮಾಣ ನಡೆಯಬೇಕಿದೆ. ಆದರೆ, ಈ ಸಂಬಂಧ ಕಾಮಗಾರಿ ಪೂರ್ಣಗೊಳ್ಳದೆ ಇರುವ ಕಾರಣ ಕುಂಬಳೆಯಲ್ಲಿ ತಾತ್ಕಾಲಿಕವಾಗಿ ಟೋಲ್‌ಗೇಟ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ, ಪೆರಿಯದಲ್ಲಿ ಯಾವಾಗ ಕಾಮಗಾರಿ ಪೂರ್ಣಗೊಳ್ಳಲಿದೆ ಅಥವಾ ಕುಂಬಳೆಯಲ್ಲಿ ಎಷ್ಟು ಸಮಯ ಸುಂಕ ವಸೂಲಾತಿ ನಡೆಯಲಿದೆ ಎಂಬ ಬಗ್ಗೆ ಉತ್ತರ ಸಿಕ್ಕಿಲ್ಲ.

ಕುಂಬಳೆಯಲ್ಲೂ ಟೋಲ್‌ಗೇಟ್‌ ನಿರ್ಮಾಣವಾದರೆ ಮಂಗಳೂರಿಗೆ ಪ್ರತಿದಿನ ವಾಹನದಲ್ಲಿ ಓಡಾಡುವವರು ತಲಪಾಡಿ ಟೋಲ್‌ಗೇಟ್‌ನಲ್ಲಿ ತಲಾ ₹ 120 ರಂತೆ ಶುಲ್ಕ ನೀಡುತ್ತಿದ್ದು, ಕುಂಬಳೆಯಲ್ಲೂ ಅದೇ ಪ್ರಮಾಣದಲ್ಲಿ ಶುಲ್ಕ ತೆರಬೇಕಾಗಿ ಬರಲಿದೆ. 20 ಕಿ.ಮೀ ಅಂತರದಲ್ಲಿ ಎರಡು ಕಡೆ ಟೋಲ್‌ ಪಾವತಿಸುವುದು ದುಬಾರಿಯಾಗಲಿದೆ. ಊರಾಲುಂಗಾಲ್ ಸೊಸೈಟಿ ಎಂಬ ಸಂಸ್ಥೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿದೆ.

ಕಾಮಗಾರಿಗೆ ಯೂತ್ ಲೀಗ್ ತಡೆ: ಈ ಕ್ರಮವನ್ನು ಪ್ರತಿಭಟಿಸಿ ಆರಿಕ್ಕಾಡಿಯಲ್ಲಿ ಟೋಲ್‌ಬೂತ್‌ ನಿರ್ಮಿಸುವ ಕಾಮಗಾರಿಗೆ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ತಡೆಒಡ್ಡಿ ಪ್ರತಿಭಟಿಸಿದರು. ಅಝೀಜ್ ಕಳತ್ತೂರು, ಎಂ.ಪಿ.ಖಾಲಿದ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ನಂತರ ಕುಂಬಳೆ ಪೊಲೀಸರು, ಶಾಸಕ ಎ.ಕೆ.ಎಂ.ಅಶ್ರಫ್ ಅವರು ಮಾತುಕತೆ ನಡೆಸಿದ್ದು, ಪ್ರತಿಭಟನೆ ಕೈಬಿಡಲಾಗಿದೆ.

ಕ್ರಮ ಹಿಂತೆಗೆಯದಿದ್ದರೆ ಆಂದೋಲನ: ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್‌ ನಿರ್ಮಾಣ ಅವೈಜ್ಞಾನಿಕವಾಗಿದೆ. ಈ ಕ್ರಮ ವಾಪಸ್ ಪಡೆಯದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಆಂದೋಲನ ನಡೆಸುವೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ.

ಜನತೆಯನ್ನು ಸುಲಿಯುವ ಕುತಂತ್ರದ ಫಲವಿದು. ತಕ್ಷಣ ಈ ಕ್ರಮ ಕೈಬಿಡದೆ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಸ್ಲಿಂ ಯೂತ್ ಲೀಗ್ ಮುಖಂಡ ಅಝೀಜ್ ಕಳತ್ತೂರು ತಿಳಿಸಿದರು.

ಜನಹಿತಕ್ಕೆ ವಿರೋಧವಾಗಿರುವ ಯಾವ ಕ್ರಮವನ್ನೂ ಪಕ್ಷ ಸಹಿಸದು. ಸಾರ್ವಜನಿಕರ ಅಭಿಪ್ರಾಯ ಪಡೆದು, ಸಂಬಂಧಪಟ್ಟ ಕೇಂದ್ರ ಸಚಿವರಲ್ಲಿ, ಅಧಿಕಾರಿಗಳಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ತಿಳಿಸಿದರು.

ಕ್ರಮ ಹಿಂತೆಗೆಯದಿದ್ದರೆ ಆಂದೋಲನ
ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್‌ ನಿರ್ಮಾಣ ಅವೈಜ್ಞಾನಿಕವಾಗಿದೆ. ಈ ಕ್ರಮ ವಾಪಸ್ ಪಡೆಯದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಆಂದೋಲನ ನಡೆಸುವೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ.
ಕಾಮಗಾರಿಗೆ ಯೂತ್ ಲೀಗ್ ತಡೆ
ಈ ಕ್ರಮವನ್ನು ಪ್ರತಿಭಟಿಸಿ ಆರಿಕ್ಕಾಡಿಯಲ್ಲಿ ಟೋಲ್‌ಬೂತ್‌ ನಿರ್ಮಿಸುವ ಕಾಮಗಾರಿಗೆ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ತಡೆಒಡ್ಡಿ ಪ್ರತಿಭಟಿಸಿದರು. ಅಝೀಜ್ ಕಳತ್ತೂರು, ಎಂ.ಪಿ.ಖಾಲಿದ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ನಂತರ ಕುಂಬಳೆ ಪೊಲೀಸರು, ಶಾಸಕ ಎ.ಕೆ.ಎಂ.ಅಶ್ರಫ್ ಅವರು ಮಾತುಕತೆ ನಡೆಸಿದ್ದು, ಪ್ರತಿಭಟನೆ ಕೈಬಿಡಲಾಗಿದೆ. ಜನತೆಯನ್ನು ಸುಲಿಯುವ ಕುತಂತ್ರದ ಫಲವಿದು. ತಕ್ಷಣ ಈ ಕ್ರಮ ಕೈಬಿಡದೆ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಸ್ಲಿಂ ಯೂತ್ ಲೀಗ್ ಮುಖಂಡ ಅಝೀಜ್ ಕಳತ್ತೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.