ಉಳ್ಳಾಲ: ಕೂಟತ್ತಜೆ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ವರ್ಕಾಡಿ ಹೊಸಮನೆ ಬ್ರಹ್ಮಶ್ರೀ ರಾಜೇಶ ತಾಳಿತ್ತಾಯ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ’ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿರಣ್ ರಾಜ್ ಶೆಟ್ಟಿ ಕುರ್ಮಾನ್ ಹೇಳಿದರು.
ಬುಧವಾರ ಇಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕೂಟತ್ತಜೆ ಕ್ಷೇತ್ರದ ಸಾನ, ಮಾಡ ಮತ್ತು ಭಂಡಾರ ಮನೆಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿವೆ. ಮಾ.30ರಂದು ಮಧ್ಯಾಹ್ನ 3.30ಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮಗಳಲ್ಲಿ ವಿವಿಧ ಸ್ವಾಮೀಜಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಶೈಲೆಂದ್ರ ಭರತ್ ನಾಯ್ಕ್ ನಚ್ಚಗುತ್ತು ಮಾತನಾಡಿ, ‘ಕೂಟತ್ತಜೆ ಕ್ಷೇತ್ರದಲ್ಲಿ ಮಾಯಿ ತಿಂಗಳ ಹುಣ್ಣಿಮೆಗೆ ಕೋಳಿಗೂಟವಾಗಿ ಸುಗ್ಗಿ ತಿಂಗಳ ಹುಣ್ಣಿಮೆಗೆ ಐದು ದಿವಸಗಳ ಜಾತ್ರೆ ನಡೆಯುತ್ತದೆ. ಈ ಬಾರಿ ಏ. 10ಕ್ಕೆ ಧ್ವಜಾರೋಹಣಗೊಂಡು 14ರ ತನಕ ಕೂಟತ್ತಜೆ ಜಾತ್ರೆ ನಡೆಯಲಿದೆ ಎಂದರು.
ಕೋಶಾಕಾರಿ ರಾಧಾಕೃಷ್ಣ ರೈ ಉಮಿಯಾ, ಪ್ರಧಾನ ಸಂಚಾಲಕ ಜಗದೀಶ್ ಆಳ್ವ ಕುವ್ವೆತಬೈಲ್, ಸುರೇಶ್ ಕೊಂಡೆ, ಪ್ರಧಾನ ಸಂಚಾಲಕ ನಂದರಾಜ್ ಶೆಟ್ಟಿ ಪಿಜಿನಬೈಲ್ ಮಾತನಾಡಿದರು. ವಿದ್ಯಾಧರ್‌ನಾಯಕ್ ಬೊಡ್ಡೋಡಿ, ಉಗ್ಗಪ್ಪ, ಪ್ರಕಾಶ್ ಪೊಯ್ಯತಬೈಲ್, ಸತೀಶ್ ಬದಿಯಾರು, ಕಾರ್ಯದರ್ಶಿಗಳಾದ ರವಿ ಗಟ್ಟಿ ಕಂಗೋಡಿ, ಆನಂದ ಜೋಗಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.