ADVERTISEMENT

ವಿಮಾನದಲ್ಲಿ ಬಂದ ಕಟ್ಟಡ ಕಾರ್ಮಿಕರು!

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:23 IST
Last Updated 2 ಅಕ್ಟೋಬರ್ 2020, 16:23 IST

ಮಂಗಳೂರು: ಕಟ್ಟಡ ನಿರ್ಮಾಣ ಸಂಸ್ಥೆಯೊಂದು ಜಾರ್ಖಂಡನ 40 ಕಾರ್ಮಿಕರನ್ನು ವಿಮಾನದ ಮೂಲಕ ಮಂಗಳೂರಿಗೆ ಕರೆಸಿಕೊಂಡಿದೆ.

ಕೋವಿಡ್–19 ಲಾಕ್‌ಡೌನ್‌ ಸಂದರ್ಭದಲ್ಲಿ ಬಹುತೇಕ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದರು. ಈಗ ಅನ್‌ಲಾಕ್‌ ಆಗಿದ್ದರೂ ಈ ಕಟ್ಟಡ ಕಾರ್ಮಿಕರಿಗೆ ಮರಳಿ ಬರಲು ಸರಿಯಾದ ವ್ಯವಸ್ಥೆ ಇಲ್ಲವಾಗಿತ್ತು. ಅದಕ್ಕಾಗಿ ನಿರ್ಮಾಣ ಹೋಮ್ಸ್‌ ಸಂಸ್ಥೆಯು ಸುಮಾರು ₹4 ಲಕ್ಷ ವೆಚ್ಚದಲ್ಲಿ ತನ್ನ ಕಾರ್ಮಿಕರನ್ನು ವಾಪಸ್‌ ಕರೆತಂದಿದೆ.

‘ದೇರೆಬೈಲ್‌ನಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್‌ನ ಸುಮಾರು 60ಕ್ಕೂ ಹೆಚ್ಚು ಕಾರ್ಮಿಕರು ಶ್ರಮಿಕ್ ರೈಲಿನಲ್ಲಿ ಜಾರ್ಖಂಡ್‌ಗೆ ತೆರಳಿದ್ದರು. ಇವರು ಮರಳಿ ಬಾರದಿದ್ದರಿಂದ ಕಟ್ಟಡ ನಿರ್ಮಾಣದ ಕೆಲಸ ಮಂದಗತಿಯಲ್ಲಿ ಸಾಗುತ್ತಿತ್ತು. ಆದರೆ, ಫ್ಲ್ಯಾಟ್‌ ಬುಕ್ ಮಾಡಿದ ಗ್ರಾಹಕರಿಗೆ ಸಕಾಲಕ್ಕೆ ಸಮಯದಲ್ಲಿ ಮನೆ ಒದಗಿಸಬೇಕಾಗಿದೆ. ಹೀಗಾಗಿ, ತ್ವರಿತ ಕೆಲಸಕ್ಕಾಗಿ ಕಾರ್ಮಿಕರನ್ನು ವಿಮಾನದಲ್ಲಿ ಕರೆತಂದಿದ್ದೇವೆ’ ಎಂದು ನಿರ್ಮಾಣ್ ಹೋಮ್ಸ್‌ ಸಂಸ್ಥೆಯ ಆಡಳಿತ ಪಾಲುದಾರ ಕೃಷ್ಣರಾಜ್ ಸಾಲ್ಯಾನ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.