ADVERTISEMENT

ತಜ್ಞ ವೈದ್ಯರ ಕೊರತೆ: ತಪ್ಪದ ಅಲೆದಾಟ

ವಿಟ್ಲ ಸಮುದಾಯ ಆರೋಗ್ಯ ಕೇಂದ್ರ

ಮಹಮ್ಮದ್ ಅಲಿ ವಿಟ್ಲ
Published 19 ನವೆಂಬರ್ 2020, 1:49 IST
Last Updated 19 ನವೆಂಬರ್ 2020, 1:49 IST
ವಿಟ್ಲದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ
ವಿಟ್ಲದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ   

ವಿಟ್ಲ: ಐವತ್ತು ವರ್ಷಗಳ ಇತಿಹಾಸ ಹೊಂದಿರುವ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ಸಮಸ್ಯೆಗಳ ನಡುವೆ ಜನರಿಗೆ ಉತ್ತಮ ಸೇವೆ ದೊರೆಯುತ್ತಿದೆ. ತಜ್ಞ ವೈದ್ಯರು, ಸಿಬ್ಬಂದಿ ಹುದ್ದೆ ಭರ್ತಿಯಾದರೆ, ರೋಗಿಗಳಿಗೆ ಸ್ಥಳೀಯವಾಗಿ ಉತ್ತಮ ಚಿಕಿತ್ಸೆ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

1970ರಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. 2009ರಲ್ಲಿ ಹೊಸ ಕಟ್ಟಡ ದೊರೆತಿದೆ. ಸುತ್ತಲಿನ ಒಂಬತ್ತು ಗ್ರಾಮಗಳ ಜನರು ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಪ್ರತಿದಿನ ನೂರಾರು ರೋಗಿಗಳು ಬರುತ್ತಾರೆ. ಸದ್ಯ ಇಲ್ಲಿ ಒಬ್ಬರು ಆಡ
ಳಿತ ವೈದ್ಯಾಧಿಕಾರಿ, ದಂತ ವೈದ್ಯ, ಆಯುರ್ವೇದ ವೈದ್ಯ ಕರ್ತವ್ಯ ನಿರ್ವಹಿ
ಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಎಂಟು ಗ್ರೂಪ್ ‘ಡಿ’ ಗ್ರೂಪ್,. ಒಂಬತ್ತು ಎನ್‌ಎಂಸಿ ಸಿಬ್ಬಂದಿ ವಿವಿಧ ಭಾಗಗಳಿಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

30 ಹಾಸಿಗೆಯ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಹೀಗಾಗಿ, ಶಸ್ತ್ರಚಿಕಿತ್ಸಾ ಕೊಠಡಿ ಇದ್ದರೂ, ಪ್ರಯೋಜನವಾಗುತ್ತಿಲ್ಲ. ಹಲವು ವರ್ಷಗಳಿಂದ ಗ್ರಾಮಸ್ಥರು ಬೇಡಿಕೆ ಸಲ್ಲಿಸುತ್ತ ಬಂದರೂ ಹುದ್ದೆ ಭರ್ತಿಗೊಳಿಸುವ ಕಾರ್ಯವಾಗಿಲ್ಲ. ಹೆರಿಗೆಗೆ ಬರುವ ಮಹಿಳೆಯರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಮಂಗಳೂರು, ಪುತ್ತೂರು ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಸ್ಕ್ಯಾನಿಂಗ್ ಅಥವಾ ವಿಸ್ತೃತ ರಕ್ತ ಪರೀಕ್ಷೆ ನಡೆಸಲು ಪುತ್ತೂರಿಗೆ ಹೋಗಬೇಕು ಎನ್ನುತ್ತಾರೆ ಸ್ಥಳೀಯರು.

ADVERTISEMENT

ಕೋವಿಡ್–19 ಸಂದರ್ಭವಾಗಿರುವ ಕಾರಣಕ್ಕೆ ರೋಗಿಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ಕೋವಿಡ್ ರೋಗಿಗಳಿಗೆ 15 ಐಸೋಲೇಷನ್ ವಾರ್ಡ್ ವ್ಯವಸ್ಥೆಯಿದೆ. ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಗಲಿರುಳು ಕೆಲಸ ಮಾಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ತಜ್ಞ ವೈದ್ಯರು, ಜನರೇಟರ್, ಪ್ರಥಮ ದರ್ಜೆ ಸಹಾಯಕರ ನೇಮಕ, ಸ್ಕ್ಯಾನಿಂಗ್ ಸೆಂಟರ್ ಇಲ್ಲಿನ ಪ್ರಮುಖ ಬೇಡಿಕೆ. ಇವುಗಳನ್ನು ಪೂರೈಸಿದರೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರೋಗಿಗಳು ಅಲೆದಾಡುವ ಸ್ಥಿತಿ ತಪ್ಪುತ್ತದೆ ಎಂಬುದು ಸ್ಥಳೀಯರ ಆಗ್ರಹ.

***

ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಜನರು ಕರ್ನಾಟಕ-ಕೇರಳ ಗಡಿಭಾಗದಿಂದ ಬರುತ್ತಾರೆ. ವ್ಯವಸ್ಥೆ ಅನುಗುಣವಾಗಿ ಚಿಕಿತ್ಸೆಗೆ ನೀಡುತ್ತೇವೆ.

–ಡಾ.ವೇದಾವತಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.