ಮೂಡುಬಿದಿರೆಯ ಕಲ್ಲಮುಂಡ್ಕೂರಿನಲ್ಲಿ ಗುಡ್ಡ ಕುಸಿದು ಸಮೀಪದ ಮನೆ ಅಪಾಯದಲ್ಲಿದೆ
ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ದೋಟ್ಟು ರಸ್ತೆಯ ಕಾನ ಎಂಬಲ್ಲಿ ಗುಡ್ಡ ಕುಸಿದು ಸಮೀಪದ ಮನೆಗೆ ಅಪಾಯ ಉಂಟಾಗಿದೆ.
ಕಳೆದ ವರ್ಷವೂ ಗುಡ್ಡ ಕುಸಿದಿದ್ದು, ಈ ಬಗ್ಗೆ ಕಲ್ಲಮುಂಡ್ಕೂರು ಪಂಚಾಯಿತಿ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಗುಡ್ಡ ಕುಸಿದ ಜಾಗದ ಬದಿಯಲ್ಲೇ ಸಾರ್ವಜನಿಕ ರಸ್ತೆಯೂ ಇದೆ.ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಸತೀಶ್ ಕಲ್ಲಮುಂಡ್ಕೂರು ಪಂಚಾಯಿತಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಜಿಲ್ಲಾಧಿಕಾರಿಗೂ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.