ADVERTISEMENT

ನೆಟ್ಟಣಿಗೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 13:41 IST
Last Updated 29 ಆಗಸ್ಟ್ 2024, 13:41 IST
ಬದಿಯಡ್ಕ ಸಮೀಪದ ನೆಟ್ಟಣಿಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಕಲಿಕೋಪಕರಣಗಳನ್ನು ವಿತರಿಸಲಾಯಿತು
ಬದಿಯಡ್ಕ ಸಮೀಪದ ನೆಟ್ಟಣಿಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಕಲಿಕೋಪಕರಣಗಳನ್ನು ವಿತರಿಸಲಾಯಿತು   

ಬದಿಯಡ್ಕ: ಪ್ರಣವ್ ಫೌಂಡೇಷನ್ ಹಾಗೂ ಆರ್‌ವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನೆಟ್ಟಣಿಗೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿಗಳನ್ನು ಗುರುವಾರ ವಿತರಿಸಲಾಯಿತು.

ಪ್ರತಿಷ್ಠಾನದ ವತಿಯಿಂದ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರತಿಷ್ಠಾನದ ಅಧ್ಯಕ್ಷ ಪುರುಷೋತ್ತಮ ಪುಣಿಂಚತ್ತಾಯ ತಿಳಿಸಿದರು.

ಫೌಂಡೇಷನ್ ಟ್ರಸ್ಟಿ ಗುರುರಂಜನ್, ವಾರ್ಡ್ ಸದಸ್ಯ ಚಂದ್ರಹಾಸ ರೈ, ದಾಮೋದರ ನಾಯ್ಕ್, ಪುಷ್ಪಲತಾ, ವಿಜಯರಾಜ್ ಪುಣಿಂಚಿತ್ತಾಯ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಜಯಲತಾ ಎಸ್.ಸ್ವಾಗತಿಸಿದರು. ಶಿಕ್ಷಕಿ ಅಬಿದಾ ಬಿ.ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.