ಮೂಲ್ಕಿ: ‘ಕೋಟಿ ಕೋಟಿ ಹಣ ಮಾಡಿದ ಅಂಬಾನಿ, ಬಿಲ್ ಗೇಟ್ಸ್‌ನಂತಹವರು ದೊಡ್ಡವರು ಅಲ್ಲ. ಸುಧಾಮ, ಪ್ರಹ್ಲಾದ, ಅರ್ಜುನನಂತಹ ಪ್ರಾಮಾಣಿಕರು, ಸತ್ಯನಿಷ್ಠರು, ಧರ್ಮನಿಷ್ಟರು ನಮಗೆ ಮಾದರಿಯಾಗಬೇಕು’ ಎಂದು ವಿಮರ್ಶಕಿ ವೀಣಾ ಬನ್ನಂಜೆ ಹೇಳಿದರು.
ಕಟೀಲು ದುರ್ಗಾಪರಮೇಶ್ವರಿ ದೇವಳ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪಾಠದಷ್ಟೇ ಆಟವೂ ಮುಖ್ಯ. ಪರೀಕ್ಷೆಯಲ್ಲಿ ಅನುತ್ತೀರ್ಣನಾದೆನೆಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚುತ್ತಿರುವುದು ಸೋಲನ್ನು ಸ್ವೀಕರಿಸುವ ಗುಣವನ್ನು ಕಲಿಸದೆ ಇರುವ ಕಾರಣಕ್ಕಾಗಿ. ಸೋಲೇ ಅಂತಿಮವಲ್ಲ, ಸೋಲು ಸಹಜ ಎನ್ನುವ ಮನಸ್ಥಿತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ಆಸ್ರಣ್ಣ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ವಿಜಯ್ ವಿ, ಕುಸುಮಾವತಿ, ರಾಜಶೇಖರ್, ಗಿರೀಶ್ ತಂತ್ರಿ, ಸರೋಜಿನಿ, ಚಂದ್ರಶೇಖರ್ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲಿಯಾನ್, ಶಿಕ್ಷಕ–ರಕ್ಷಕ ಸಂಘಗಳ ಶುಭಲತಾ ಶೆಟ್ಟಿ, ಗ್ರೆಗರಿ ಸಿಕ್ವೇರ, ಅನಿತಾ, ಪ್ರಕಾಶ್ ಆಚಾರ್ಯ, ರಮೇಶ್ ಕೆ.ಜಿ, ಜಯರಾಮ್, ಸೃಷ್ಟಿ ಶೆಟ್ಟಿ, ವೈಷ್ಣವಿ ಭಟ್ ಹಾಜರಿದ್ದರು. ಶಿವಮನ್ಯು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.