ADVERTISEMENT

ಸುಂಕದಕಟ್ಟೆ: ಮಹಿಳಾ ಪ್ರಾಂಶುಪಾಲರಿಗೆ ರಿವಾಲ್ವರ್‌ ತೋರಿಸಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 12:03 IST
Last Updated 6 ಸೆಪ್ಟೆಂಬರ್ 2019, 12:03 IST

ಬಜ್ಪೆ: ‘ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮಿ ಎಜುಕೇಶನ್ ಟ್ರಸ್ಟ್‌ನ ಕುಂದುಕೊರತೆ ಸಭೆ ನಡೆಯುತ್ತಿದ್ದಾಗ ಇನ್‍ಸ್ಟಿಟ್ಯೂಟಿನ ಪ್ರಾಂಶುಪಾಲೆಗೆ ಟ್ರಸ್ಟ್‌ನ ಅಧ್ಯಕ್ಷರೊಂದಿಗೆ ಹಾಜರಾಗಿದ್ದ ದೀಪಕ್ ಕೋಟ್ಯಾನ್ ಎಂಬುವರು ರಿವಾಲ್ವರ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂಬುದಾಗಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಂಶುಪಾಲೆ ಶಶಿಪ್ರಭಾ(53) ಇತರ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು ಹಾಜರಿದ್ದ ಸಭೆ ನಡೆಯುತ್ತಿದ್ದಂತೆ ಪ್ರಕರಣ ನಡೆದಿದೆ. ದೀಪಕ್ ಕೋಟ್ಯಾನ್ ಎದ್ದು ನಿಂತು, ‘ನಾವು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ನಿಮಗೆ ಏನು ಮಾಡಬೇಕು ಎಂದು ನನಗೆ ತಿಳಿದಿದೆ. ನನ್ನ ಬಳಿ ಲೈಸೆನ್ಸ್ ಇರುವ ರಿವಾಲ್ವರ್ ಇದೆ’ ಎಂದು ಬಹಿರಂಗವಾಗಿ ಘೋಷಿಸಿ, ಸಭೆಯಲ್ಲಿದ್ದವರಿಗೆ ರಿವಾಲ್ವರ್‌ನಿಂದ ಬೆದರಿಕೆಯೊಡ್ಡಿದ್ದಾರೆ’ ಎಂದು ಶಶಿಪ್ರಭಾ ಆರೋಪಿಸಿದ್ದಾರೆ.

‘ಆರೋಪಿ ದೀಪಕ್ ವಿರುದ್ಧ ಬಜ್ಪೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506(2) ಹಾಗೂ ಭಾರತೀಯ ಸಶಸ್ತ್ರ ಕಾಯ್ದೆ 1959ರ ಸೆಕ್ಷನ್ 30ರಡಿ ಪ್ರಕರಣ ದಾಖಲಾಗಿದೆ’ ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.