ADVERTISEMENT

ಬೆಳ್ತಂಗಡಿ: ಲಯನ್ಸ್ ಪ್ರಾಂತೀಯ ಸಮ್ಮೇಳನ 27ಕ್ಕೆ

ನ. 27 ರಂದು ಗುರುವಾಯನಕೆರೆಯಲ್ಲಿ ಲಯನ್ಸ್ ಪ್ರಾಂತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 2:40 IST
Last Updated 24 ನವೆಂಬರ್ 2022, 2:40 IST

ಬೆಳ್ತಂಗಡಿ: ‘ಲಯನ್ಸ್ ಜಿಲ್ಲೆ 317 ಡಿ‘ ಯ ಪ್ರಾಂತ್ಯ 5 ರ ಪ್ರಾಂತೀಯ ಸಮ್ಮೇಳನವು ನ. 27 ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ಜರಗಲಿದೆ.

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ದಿಕ್ಸೂಚಿ ಭಾಷಣ ಮಾಡುವರು ಎಂದು ಪ್ರಾಂತ್ಯ ಸಮ್ಮೇಳನ‌ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು ಮತ್ತು ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಂತ್ಯದ ಪ್ರಥಮ ಮಹಿಳೆ ಶಾಲಿನಿ ವಸಂತ ಶೆಟ್ಟಿ ಸಮ್ಮೇಳನ ಉದ್ಘಾಟಿಸುವರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉಪಸ್ಥಿತರಿರುವರು. ಪ್ರಾಂತ್ಯ 5ರ ವ್ಯಾಪ್ತಿಯ ಆಲಂಗಾರು, ಬಪ್ಪನಾಡು ಇನ್‌ಸ್ಪಯರ್, ಮುಚ್ಚೂರು ನೀರುಡೆ, ಗುರುಪುರ ಕೈಕಂಬ, ಮೂಡುಬಿದಿರೆ, ಸುಲ್ಕೇರಿ, ವೇಣೂರು ಕ್ಲಬ್‌ಗಳ ಸದಸ್ಯರು, ಆಹ್ವಾನಿತರು ಸೇರಿದಂತೆ 500 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದರು.

ADVERTISEMENT

ಪ್ರಾಂತೀಯ ಸಮ್ಮೇಳನದ ನೆನಪಿಗಾಗಿ ₹6.50 ಲಕ್ಷ ವೆಚ್ಚದಲ್ಲಿ ಬಂಗಾಡಿ ಸರ್ಕಾರಿ ಪ್ರೌಢಶಾಲೆಗೆ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಹಾಗೂ ನಡ ಸರ್ಕಾರಿ ಹಿರಿಯ ಪಾಥಮಿಕ ಶಾಲೆಗೆ ಕಂಪ್ಯೂಟರ್ ಪ್ರಯೋಗಾಲಯ ನೀಡಲಾಗಿದೆ. ಅದನ್ನು ಲಯನ್ಸ್ ಗವರ್ನರ್ ಸಂಜೀತ್ ಶೆಟ್ಟಿ ಉದ್ಘಾಟಿಸುವರು ಎಂದರು.

‘ಪ್ರತೀಕ’ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ಸಂಜೆ 4ಕ್ಕೆ ನೋಂದಣಿ, 4.30ರಿಂದ ಪ್ರಾಂತ್ಯದ ಎಲ್ಲಾ ಕ್ಲಬ್‌ಗಳ ಬ್ಯಾನರ್ ಪ್ರಸ್ತುತಿ, ಕಾರ್ಯಕಲಾಪಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 8.30ಕ್ಕೆ ಊಟ ಏರ್ಪಡಿಸಲಾಗಿದೆ. ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಲಯನ್ಸ್‌ನ ಹೇಮಂತ ರಾವ್ ಯೆರ್ಡೂರು, ಸುರೇಶ ಶೆಟ್ಟಿ ಲಾಯಿಲ, ಡಾ.ದೇವಿಪ್ರಸಾದ್‌ ಬೊಲ್ಮ, ಅಶ್ರಫ್ ಆಲಿಕುಂಞಿ ಮುಂಡಾಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.